ಪ್ರಲಾಪಗಳು 3:22
ಕರ್ತನ ಕನಿಕರಗಳಿಂದಲೇ ನಾವು ನಾಶವಾಗ ಲಿಲ್ಲ, ಆತನ ಅಂತಃಕರುಣೆಯು ಮುಗಿಯುವದಿಲ್ಲ.

1 ಪೇತ್ರನು 1:3
ನಮ್ಮ ಕರ್ತನಾದ ಯೇಸು ಕ್ರಿಸ್ತನ ತಂದೆಯೂ ದೇವರೂ ಆಗಿರುವಾತನಿಗೆ ಸ್ತೋತ್ರವಾಗಲಿ. ಆತನು ಯೇಸು ಕ್ರಿಸ್ತನನ್ನು ಸತ್ತವರೊಳಗಿಂದ ಎಬ್ಬಿಸಿದ್ದರಲ್ಲಿ ತನ್ನ ಮಹಾ ಕರುಣಾನುಸಾರವಾಗಿ ಜೀವಕರವಾದ ನಿರೀಕ್ಷೆಗೂ

ಯೆರೆಮಿಯ 29:11
ನಾನು ನಿಮ್ಮನ್ನು ಕುರಿತು ಮಾಡುವ ಆಲೋಚನೆ ಗಳನ್ನು ಬಲ್ಲೆನೆಂದು ಕರ್ತನು ಅನ್ನುತ್ತಾನೆ; ಅವು ಕೇಡಿ ಗಲ್ಲ, ಸಮಾಧಾನಕ್ಕಿರುವ ಆಲೋಚನೆಗಳು; ನೀವು ನಿರೀಕ್ಷಿಸಿದ್ದ ಸ್ಥಿತಿಯನ್ನು ಕೊಡುವವುಗಳೇ.

ಯೆಶಾಯ 43:18
ಹಿಂದಿನ ಸಂಗತಿಗಳನ್ನು ಜ್ಞಾಪಕಕ್ಕೆ ತಂದುಕೊಳ್ಳಬೇಡಿರಿ; ಇಲ್ಲವೆ ಹಳೇ ಸಂಗತಿಗಳನ್ನು ಯೋಚಿಸಬೇಡಿರಿ.
 
ಕೀರ್ತನೆಗಳು 20:4-5
4   ನಿನ್ನ ಸ್ವಂತ ಹೃದಯದ ಪ್ರಕಾರ ನಿನಗೆ ಕೊಡಲಿ; ನಿನ್ನ ಆಲೋ ಚನೆಯನ್ನೆಲ್ಲಾ ಪೂರೈಸಲಿ.
5   ನಾವು ನಿನ್ನ ರಕ್ಷಣೆಯಲ್ಲಿ ಹರ್ಷಿಸಿ ನಮ್ಮ ದೇವರ ಹೆಸರಿನಲ್ಲಿ ಧ್ವಜ ಎತ್ತುವೆವು; ಕರ್ತನು ನಿನ್ನ ಬಿನ್ನಹಗಳನ್ನೆಲ್ಲಾ ಪೂರೈ ಸಲಿ.

ಮಿಕ 7:7
ಆದರೆ ನಾನು ಕರ್ತನನ್ನು ಎದುರು ನೋಡುವೆನು; ನನ್ನ ರಕ್ಷಣೆಯ ದೇವರಿಗೋಸ್ಕರ ಕಾದುಕೊಳ್ಳುವೆನು; ನನ್ನ ದೇವರು ನನ್ನನ್ನು ಕೇಳುವನು.
 
Go to top