Verse 1

ದೇವಾ ನೀ ಭಕ್ತ ಸಭೆಯ
ನಿವಾಸಸ್ಥಾನವು
ವಿಶ್ವಾದಿಯಿಂ ನೀನಿದ್ದವ
ಸರ್ವೇಶ ನಿತ್ಯಕು.

Verse 2

ಮನುಷ್ಯ ಹುಟ್ಟಿದಾರಾಭ್ಯ
ವಿನಾಶಪಾತ್ರನೇ
ನಿನ್ನಲ್ಲೋ ಸಾವಿರಾಯುಷ್ಯ
ದಿನಕ್ಕೆ ತುಲ್ಯವೇ.

Verse 3

ಒಪ್ಪೊತ್ತೆ ಇರ್ವ ಹುಲ್ಲಿನ
ಓಪಾದಿ ನರನು
ಎಪ್ಪತ್ತೂ ವರ್ಷದಾಯುಸ
ವಿಪತ್ತೇ ಸರ್ವವು.

Verse 4

ಈ ಪೀಡೆಗೊಂದೇ ಕಾರಣ
ಈ ಪಾಪರಾಶಿಯೇ
ಕೊಪಾಗ್ನಿಯಿಂದ ನಶಿಸ
ನಾಂ ಪಾತ್ರರಲ್ಲವೇ?

Verse 5

ಈ ನಿನ್ನ ಕೋಪಕ್ಕಂಜುತ
ದಿನಾಂತ ನೆನದು
ಜ್ಞಾನಿಗಳಾಗಿ ವರ್ತಿಸ
ನೀನುಪದೇಶಿಸು.

Verse 6

ಪ್ರಸನ್ನನಾಗು ಕರ್ತನೇ
ಯೇಸೂ ನಿಮಿತ್ತವು
ನೀ ಸಿಟ್ಟು ಮಾಡಿದಷ್ಟಕ್ಕೆ
ಉತ್ಸಾಹಗೊಲ್ಳಿಸು.

Verse 7

ಸಂವರ್ಧಿಸೆಮ್ಮ ಬದುಕು
ನಿವಾರಿಸಘವ
ಜೀವಾಂತ್ಯದಲ್ಲಿ ಕಾಣಿಸು
ಅ ಸ್ವರ್ಗಭಾಗ್ಯವ.

Verse 8

ವಿಶ್ವಾದಿಯಿಂದಿದ್ದಾತನೆ
ಈ ವರ್ಷಕ್ಕಾಗಿರು
ವಿಶ್ವಾಸಿಸಿರ್ದ ನಮಗೆ
ನಿವಾಸಸ್ಥಾನವು.

Go to top