Verse 1

ನಾವೀಗ ಕೂಡಿ ಹಾಡಿ
ಕರ್ತಂಗೆ ಸ್ತೋತ್ರ ಮಾಡಿ
ಕೃತಜ್ಞರಾಗಿರೋಣ
ಆತಂಗೆ ಪ್ರಾರ್ಥಿಸೋಣ.

Verse 2

ಒಂದೊರ್ಷ ಬಿದ್ದು ಸಂತು
ಮತ್ತೊಂದು ಮೂಡಿ ಬಂತು
ಈ ದಿನಕಾತ ತಾನೆ
ನಮ್ಮನ್ನು ತಂದಿದ್ದಾನೆ.

Verse 3

ಸಹಸ್ರ ಚಿಂತೆಯಲ್ಲು
ಹೃತ್ಕಾಯಕಷ್ಟದಲ್ಲು
ವಿಜಯ ಹೊಂದಿದ್ದೇವೆ
ಹೃದ್ಧೈರ್ಯ ಪಡುತೇವೆ.

Verse 4

ತಾಯ್ ಕೂಸು ನಿತ್ಯದಲ್ಲಿ
ಆರೈಸೋ ರೀತಿಯಲ್ಲಿ
ಯೆಹೋವನೆಮ್ಮ ಕಾದು
ಸಹಾಯಗಾರನಾದ.

Verse 5

ನೀನೆಮ್ಮ ಜೀವಗತಿ
ನಿನ್ನಕ್ಷಿಯಿಂದ ಪತಿ
ಕಾಪಾಡು ನಮ್ಮ ಬಲ
ಯತ್ನೈಸಲೇನು ಫಲ?

Verse 6

ದಿನಾಲು ಹೊಸದಾಗಿ
ನೀ ಪ್ರೀತಿಸಿದ್ದಕ್ಕಾಗಿ
ನಾಂ ಗೈವ ಸ್ತೋತ್ರಸ್ವರ
ಅಲೈಸು ಶೋಕಹರ.

Verse 7

ಇನ್ನಾಗೋ ಶ್ರಮೆಯಲ್ಲಿ
ವಿವಿಧ ಭಾರದಲ್ಲಿ
ನಮಾತ್ಮ ಸುಯ್ದು ಕುಗ್ಗೆ
ಆಗೆಮ್ಮ ಸುಖಬುಗ್ಗೆ.

Verse 8

ನಿನ್ನಾಶ್ರಯಕ್ಕೆ ಬಂದು
ಐ ಒಲ್ಮೆ ತೋರಿಸೆಂದು
ಗೋಳಾಡಲೊಬ್ಬ ನರ
ತಂದಿಕ್ಕು ತಾಳ್ಮೆವರ.

Verse 9

ರಕ್ತಾಶ್ರು ಚಲ್ವದನ್ನು
ಐ ನೀಗಿ ಲೋಕವನ್ನು
ಅನ್ಯೋನ್ಯಶಾಂತಿಯಿಂದ
ತುಂಬಿನು ವೇಗದಿಂದ.

Verse 10

ಈ ಹಿರಿ ಕಿರ್ಯರಲ್ಲಿ
ನಿನ್ನೊಲ್ಮೆಕಾಂತಿ ಚಲ್ಲಿ
ಕೊಡಯ್ಯ ನಮ್ಮ ಪಾದ
ಇಟ್ಟಲ್ಲಿ ಆಶೀರ್ವಾದ.

Verse 11

ದುರ್ಗತಗಾಗು ಗತಿ
ವಿಮನಗಾಗು ಮತಿ
ನಿರ್ಬಲಗಾಗು ಬಲ
ನಿಃಸ್ಥಲಗಾಗು ಸ್ಥಲ.

Verse 12

ರೋಗಿಷ್ಠರಿಂಗೆ ದಯ
ಗೈದಿಹ ಕಷ್ಟ ಭಯ
ಇತ್ಯಾದಿ ಮನೋಭಾರ
ಮಾಡಯ್ಯ ಪರಿಹಾರ.

Verse 13

ವರಾತಿ ಶ್ರೇಷ್ಠವಾದ
ನಿನ್ನಾತ್ಮಸುಪ್ರಸಾದ
ಕೊಟ್ಟೈದಿಸಂತ್ಯದಲ್ಲಿ
ನಮ್ಮನ್ನು ಸ್ವರ್ಗದಲ್ಲಿ.

Verse 14

ಕೊಡಯ್ಯ ಬೇಡಿದ್ದನ್ನು
ಕ್ರಿಸ್ತ್ಯೇಸು ರಕ್ಷೆಯನ್ನು
ಈ ಹೊಸ ವರ್ಷದಲ್ಲಿ
ಕಣ್ಗಾಣೆಸೆಲ್ಲರಲ್ಲಿ.

Go to top