Verse 1

ದಯಾಳು ದೇವರೇ
ನಾವೀಗ ನಿನ್ನ ಸೇವೆ.
ಕೃತಜ್ಞಾರಾಗಿಯೇ
ಪುರೈಸ ಬಂದಿದ್ದೇವೆ.
ನಮ್ಮಲ್ಲಿ ಬಂದಿರು
ನೀ ಹೇಳಿದಂತೆಯೇ.
ಆಲೈಸು ನಮ್ಮನು
ಕಟಾಕ್ಷದಿಂದಲೇ.

Verse 2

ಸಂದ್ಹೋದ ವರ್ಷದಿ
ಅಪಾರ ಪ್ರೀತಿಯಿಂದ.
ನೀನೆಮ್ಮ ನಡಿಸಿ
ಆಶ್ಚರ್ಯ ರೀತಿಯಿಂದ.
ಈ ಹೊಸ ವರ್ಷಕೆ
ತಂದಿದ್ದಿದೇವರೆ.
ನಮ್ಮಾತ್ಮ ನಿನ್ನನು
ಸಂಕೀರ್ತಿಸುತ್ತದೆ.

Verse 3

ಪ್ರಮಾಣ ಮಿರುತೆ
ನಾ ಗೈದ ಪಾಪರಾಶಿ.
ಪ್ರೇಮಾಬ್ಧಿ ಯೇಸುವೇ
ನೀ ಮಾಡೆನ್ನನ್ನು ವಾಸಿ.
ಐ ಮನ್ನಿಸೆನಗೆ
ಸಮಸ್ತ ಪಾಪವ.
ನಾ ನಡಿಸುವೆನು
ನಿನ್ನಷ್ಟ ಸೇವೆಯ.

Verse 4

ಕಾಯೆನ್ನ ಪ್ರಾಣವ
ಈ ಹೊಸ ವರ್ಷದಲ್ಲಿ.
ನಿನ್ನಾತ್ಮವರವ
ಸಂವರ್ಧಿಸು ನನ್ನಲ್ಲಿ.
ಸಮಸ್ತ ಕಾಲದಿ
ಇರೆನ್ನ ಹತ್ತರ.
ನನ್ನಾತ್ಮದೇಹದಿ
ನೀ ಮಾಡ ವಸ್ತಿಯ.

Verse 5

ನನ್ನಂತ್ಯ ವರ್ಷವು
ಸಮಿಪವಾದೀತಲ್ಲ?
ನೀ ಯೇಸು ಬರೊದು
ಯಾವಾಗ? ಯಾರು ಬಲ್ಲ?
ಈಗೀಗಲೆನ್ನನು
ನೀ ಸಿದ್ಧಿಸೀಶನೆ.
ನಿನ್ನನು ನಿತ್ಯಕು
ಕೊಂಡಾಡುತ್ತಿರುವೆ.

Go to top