Verse 1

ಆಯುಷ್ಯ ದಾಟುತಾ
ಈ ಜೀವ ಹಾರೋದು.
ಭರ್ರನೆ ಬಪ್ಪುದು
ಜೀವಾಂತ್ಯಕಾಲವು.
ಸಂದ್ಹೋದ ದಿನವು
ಸಂದ್ಹೋದ ವರುಷ
ಎಲ್ಲಿವೆ? ಆಯಿತೋ
ಒಂದು ಪ್ರಯೋಜನ?

Verse 2

ಈ ಜೀವವೆನಗೆ
ಒಲ್ದಿತ್ತ ದೇವರೆ
ಅದನ್ನು ತಿರಿಗಿ
ತಂದೀಯ್ವೆ ನಿನಗೆ.
ನಿಂಗಾಗಿ ಬದುಕಿ
ನಿಂಗಾಗಿ ಸಾಯುವೆ
ನಾ ನಿತ್ಯ ಕಾಲಕು
ನಿನ್ನಾಳು ಕರ್ತನೆ.

Verse 3

ಇದೆನ್ನ ಮನೆಯೇ?
ಇದನ್ಯ ಸ್ಥಳವೇ.
ಇಲ್ಲಿಂದ ಹೋಗುವೆ
ತಂದೇ ನಿವಾಸಕೆ.
ಅಯುಷ್ಯ ಶೇಷವು
ನನ್ನಪ್ಪಾ ನಿನ್ನದು
ಭೂಪರಲೋಕದಿ
ನಾ ನಿನ್ನ ಮಗನು.

Verse 4

ನನ್ನನ್ನು ಇಹದಿ
ನೀ ಸಿದ್ಧಿಸೊಡೆಯ.
ನೀನೊಳ್ಳೆ ಪದವಿ
ನೀ ಜೀವದರಸ.
ನಾನಂತ್ಯ ಕಾಲದಿ
ನೋಡದೆ ನನ್ನನ್ನು
ಕ್ರಿಸ್ತನ್ನ ನೋಡುವ
ದಯಾನುಗ್ರಹಿಸು.

Verse 5

ಸೈತಾನಗೆನ್ನೊಳು
ಇನ್ನೇನು ಪಾಲದೆ?
ನಾ ಪಾಪಿಯಾದರು
ನನ್ನಾಸ್ತಿ ಯೇಸುವೆ.
ಕೆಟ್ಠೋದ ಮಗಗೆ
ಕಟಾಕ್ಷ ಸಿಕ್ಕಿತು.
ನಿಂಗೆನ್ನ ಪಿತನೆ
ಕೃತಜ್ಞನಾದೆನು.

Verse 6

ಪಿತಾಪುತ್ರಾತ್ಮನೆ
ನೀನೆನ್ನ ದೇವರು
ನೀನೆನ್ನ ರಕ್ಷಕ
ನೀ ಸೃಷ್ಟಿ ಕರ್ತನು.
ಉಂಟೆನ್ನ ರಕ್ಷಣೆ
ಸಂಪೂರ್ಣ ನಿನ್ನಲೆ
ನಿನ್ನಡಿ ನನಗೆ
ಹೃತ್ಸೌಖ್ಯವಾದದೆ.

Verse 7

ಇದೆನ್ನ ಸಾಕ್ಷಿಯು
ನೀ ಮುಖ್ಯ ಪದವಿ
ನೀನಾತ್ಮಜೀವಕೆ
ವಿಶ್ರಾಂತಿ ಕೊಡುತಿ.
ನಿಂಗೆರಗುವದೇ
ಮಹಾಂತ ಹರ್ಷವು
ನಿನ್ನಾಳುತನವೇ
ಅನಂತ ಮುಕ್ತಿಯು.

Verse 8

ನನ್ನಾತ್ಮ ಕಾದುಕೋ
ಸಂಧೈರ್ಯದಾತನೇ.
ಅದನ್ನು ಕೊಟ್ಟೆನು
ನಾ ನಿನ್ನ ವಶಕೆ.
ನನ್ನಂತ್ಯಶ್ವಾಸವು
ಪ್ರೇಮೋಕ್ತಿಯಹುದು
ಆಚೇಲಿ ನಿನ್ನಲ್ಲಿ
ವಿಶ್ರಾಂತಿಯಾಹೆನು.

Go to top