Verse 1

ಸಂಗೀತವನ್ನು ತರ್ರಿ
ಯೆಹೋವನಾಮಕೆ
ಉತ್ಸಾಸದಿಂದ ಬರ್ರಿ
ಯುಗಾದಿ ಹಬ್ಬಕೆ.

Verse 2

ದಯಾಳು ದೇವರನ್ನು
ಕೊಂಡಾಡು ಸಭೇಯೇ
ಮಹೋಪಕಾರವನ್ನು
ನಿಂಗಿತ್ತನಲ್ಲವೇ.

Verse 3

ಹಾಡೋಣ ಇಂಪು ರಾಗ
ಯೆರೂಸಲೇಮಿಗೆ
ಪ್ರಯಾಣ ಮಾಡುವಾಗ
ನಾಂ ಹಾಡ ಬಾರದೆ?

Verse 4

ಅಲ್ಲೆಮ್ಮ ಸ್ವಂತ ದೇಶ
ಅಲ್ಲೆಮ್ಮ ದ್ರವ್ಯವೇ
ಆ ಪಟ್ಣದೊಳ್ ಪ್ರವೇಶ
ಮಾಡೋಣ ಭ್ರಾತ್ರರೇ.

Verse 5

ನಾವಿಲ್ಲಿ ಕೂಡಿದಾಗ
ಮತ್ತಗಲುವೆವು
ಅಲ್ಲ್ಯಾಗೊ ಸ್ತೊತ್ರರಾಗ
ಎಂದೆಂದು ತೀರದು.

Verse 6

ಸಂತೋಷ ತೀರದಂಥ
ಉತ್ಸಾಹಕಾಲವು
ಮಾರ್ಪಾಟವಾಗುದಂಥ
ಸುವರ್ಷ ಬಪ್ಪುದು.

Verse 7

ಕರ್ತಾ ಆ ಹಬ್ಬಕಾಗಿ
ನಮ್ಮನ್ನು ಸಿದ್ಧಿಸು
ನಿನ್ನನ್ನು ನೋಡಲಾಗಿ
ಕಟಾಕ್ಷ ಪಾಲಿಸು.

Go to top