Verse 1

ಈ ವರೆಗೆಮ್ಮ ದೇವರು
ಸಹಾಯ ಮಾಡಿದ್ದಾನೆ.
ಈ ವರೆಗ್ಹಗಲಿರುಳು
ನಮ್ಮನ್ನು ಕಾದಿದ್ದಾನೆ.
ಈ ವರೆಗೆಮ್ಮ ನಡಿಸಿ
ಸಂತೋಷ ದಯಪಾಲಿಸಿ
ಉದ್ಧಾರ ಮಾಡಿದ್ದಾನೆ.

Verse 2

ಸಂಸ್ತುತಿ ನಿಂಗೆ ಕರ್ತನೇ
ಸಂಕೀರ್ತಿ ನಮಸ್ಕಾರ.
ನಿಶ್ಚಲ ಪ್ರೀತಿಯಿಂದಲೇ
ಸ್ವಪ್ರಜೆಯ ವಿಚಾರ.
ನೀ ಗೈದದನ್ನು ನೆನಸಿ
ಕೊಂಡಾಡುತ್ತೇವೆ ಹರ್ಷದಿ
ನಿನ್ನೆಲ್ಲಾ ಉಪಕಾರ.

Verse 3

ಇನ್ನಾದರೂ ಸ್ವಜನಕೆ
ಆಶ್ರಯಸ್ಥಾನವಾಗು.
ಸರ್ವತ್ರ ಪ್ರತಿ ಗಳಿಗೆ
ಸ್ವತಃ ಸಮಿಪವಾಗು
ಕ್ರಿಸ್ಯ್ತೇಸುಶ್ರಮಮೂಲದಿಂ
ಸಮಸ್ತ ಕಷ್ಟದೊಳಗಿಂ
ನಮ್ಮನ್ನು ಪಾರು ಮಾಡು.

Go to top