Verse 1

ಹೋಯ್ತೊಂದು ವತ್ಸರ
ನಮ್ಮಲ್ಪಾಯುಷ್ಯದಿಂದ.
ಹೋಯ್ತ್ ಸುಖ ದುಃಖವು
ನಮ್ಮನುಭವದಿಂದ.
ಇನ್ನೊಮ್ಮೆ ಬಾರದು
ಸಂದ್ಹೋದ ವರುಷ
ನಮ್ಮನ್ನು ದೇವರು
ವಿಚಾರ ಮಾಡುವ.

Verse 2

ಕರ್ತಾ ನೀ ಬಿಡದೆ
ನಮ್ಮನ್ನು ಪ್ರೀತಿಸಿದ್ದಿ.
ಮಹಾ ಕಾರುಣ್ಯದಿ
ನೀನೆಮ್ಮನುಳಿಸಿದ್ಧಿ.
ನಿನ್ನೆಲ್ಲ ದಯವು
ಅಮೂಲ್ಯವಾದದೆ
ನಮ್ಮಿಡಿ ಮನಸು
ಕೃತಜ್ಞವಾಗಿದೆ.

Verse 3

ನಿನ್ನನ್ನು ತಿರಿಗಿ
ಆಶ್ರೈಸಿಕೊಳ್ಳುತ್ತೇವೆ.
ನಿನ್ನಲ್ಲಿ ನಿತ್ಯವು
ಸುಬದ್ರವಾಗಿದ್ದೇವೆ.
ಶತ್ರುಂಗಳೊಳಗೆ
ನೀನೆಮ್ಮ ದುರ್ಗವು
ನಿನ್ನಲ್ಲಿ ಸೇರಲೆ
ಕೇಡೇನೂ ತಾಗದು.

Verse 4

ಈಯ್ ಹೊಸ ವರ್ಷಕೆ
ವಿಶ್ವಾಸ ಹೊಸದಾಗಿ.
ಸದ್ಧರ್ಮ ಸ್ಥಾಪಿಸು
ಪ್ರಾಚೀನ ರೂಪವಾಗಿ.
ಮನೇಂದ್ರಿಯಂಗಳಂ
ಹೊಸ್ತಾಗ ಪ್ರೇರಿಸು.
ಸದ್ವಾಕ್ಯದೀಪವಂ
ನಮ್ಮೊಳಗುಳಿಸು.

Verse 5

ನಮ್ಮಲ್ಲಿ ಹೆಚ್ಚಿಸು
ನಿರೀಕ್ಷೆ ಪ್ರೀತಿಯನ್ನು.
ಕಷ್ಟಾದಿ ಬಂದರೆ
ಹೆಚ್ಚಿಸು ತಾಳ್ಮೆಯನ್ನು.
ನೀ ನಿನ್ನ ಸತ್ಯತೆ
ದಿನಾಲು ತೋರಿಸು.
ನಮ್ಮೆಲ್ಲ ಕಷ್ಟದಿ
ನಮ್ಮನ್ನುದ್ದರಿಸು.

Verse 6

ದುರಾಶಾಮೂಲವ
ನಮ್ಮಿಂದ ಕಿತ್ತು ಬಿಡು.
ಶರೀರ ಪ್ರಾಣಕೆ
ಬೇಕಾದದನ್ನು ನೀಡು.
ಮುಂದಿನ ಮಾರ್ಗವ
ಕರ್ತಾ ನೀ ನೆಮಿಸು.
ನಿನ್ನಿಷ್ಟ ಚಿತ್ತಕೆ
ನಾವೊಪ್ಪಿಕೊಂಡೆವು.

Verse 7

ಈ ವರ್ಷ ಯಾವಗೆ
ಈ ಲೋಕವನ್ನು ಬಿಟ್ಟು.
ಹೋಗಾಜ್ಞೆ ಕೊಡುವಿ
ಅವಂಗೆ ದಯವಿಟ್ಟು.
ವಿಶ್ವಾಸಾನಂದದಿ
ನಿನ್ನಷ್ಟ ಸ್ಥಾನಕೆ.
ಪ್ರವೇಶ ಕಾಣಿಸು
ಅನಾದ್ಯನಂತನೆ.

Go to top