Verse 1

ಹೊಸದಾದ ವರ್ಷಕೆ
ಏಕನಾದ ಸಹಕಾರಿ
ಮುಂದಿನ ಪ್ರಯಣಕೆ
ಅತ್ಯಗತ್ಯ ರಹದಾರಿ
ಯೇಸು ಕ್ರಿಸ್ತನೊಬ್ಬನೆ
ಆತನನ್ನು ಅಗಲೆ.

Verse 2

ಯೇಸುವಿನ ವಾಕ್ಯವು
ನನ್ನ ದ್ರವ್ಯ ನನ್ನ ಶಸ್ತ್ರ
ಯೇಸುವಿನ ನಾಮವು
ನನ್ನ ಧ್ವಜ ನನ್ನ ವಸ್ತ್ರ
ಅತಿಶ್ರೇಷ್ಠ ಮಹಿಮೆ
ಆಗಲೀ ಶ್ರೀನಾಮಕೆ.

Verse 3

ಇಷ್ಟಸಿದ್ಧಿ ನನಗೆ
ಕ್ರಿಸ್ತನಲ್ಲಿ ಇರಲಾಗಿ
ನಾನು ಈ ಯುಗಾದಿಗೆ
ಪೂರ್ಣ ಧೈರ್ಯಶಾಲಿಯಾಗಿ.
ಸೇರಿ ದಿನ ದಿನಕೆ
ಹೆಚ್ಚು ಭಾಗ್ಯ ಹೊಂದುವೆ.

Verse 4

ಯೇಸುವನ್ನು ಹಿಡಿದು
ಹೋಗುತೇನೆ ದಾರಿಯಲ್ಲಿ
ಆತ ಕೋಲು ದೀಪವು
ನನ್ನ ಭೂಸಂಚಾರದಲ್ಲಿ
ಆತನಿರೆ ಎಲ್ಲವು
ಅತಿಹಿತವಾಗೋದು.

Verse 5

ಚಿಂತೆತಾಪತ್ರಯವು
ಯೇಸುವಿನ ನಾಮದಿಂದ
ಪರಿಹಾರವಾಗೊದು
ಈ ಶ್ರೀನಾಮಬಲದಿಂದ
ನಾನು ಸೋತು ಹೋಗದೆ
ಪೂರ್ಣ ಜಯಗೊಳ್ಳುವೆ.

Go to top