Verse 1

ಒಂದೊರ್ಷದ ಸಂಚಾರ
ಸಂಧೊಗಿ ಬಿಟ್ಟಿತು.
ಈರಿಪ್ಪತ್ತಾರು ವಾರ
ನಮ್ಮಾಯು ಕುಂದಿತು.
ಕಾಲಿಟ್ಟ ಹೊಸ ವರ್ಷ
ಎಂಥಾದ್ದು ನಮಗೆ?
ತಂದಿತೋದುಃಖ ಹರ್ಷ
ಕರ್ತಂಗೆ ಗೊತ್ತದೆ.

Verse 2

ನಂಗಿದ್ದ ಪ್ರಿಯರಲ್ಲಿ
ಅನೇಕರಿಲ್ಲವು.
ಬರೋ ಯುಗಾದಿಯಲ್ಲಿ
ಇನ್ನಾರು ಇರ್ವರು?
ಯೆಹೋವನೇನ್ನಾಶ್ರಯ
ಈ ವರೆ ಕಾದನು.
ಇನ್ನಾತನೇ ಸಹಾಯ
ನನ್ನನ್ನು ಕಾಯ್ವನು.

Verse 3

ಭೂಲೋಕಧನವೆಲ್ಲ
ಸುಗತಿ ತಾರದು.
ಭೂಲೋಕ ವೈದ್ಯರೆಲ್ಲ
ಸುಕ್ಷೇಮ ಕೊಡರು.
ಶ್ರೀ ಯೇಸು ನೋಡೀ ಮಾಯ
ನೀನೆನ್ನ ವೈದ್ಯನು.
ನನ್ನಾತ್ಮ ಪ್ರಾಣ ಕಾಯ
ನಿಂಗೊಪ್ಪಿಸಿದೆನು.

Verse 4

ಕಾಪಾಡು ದೀನರನ್ನು
ಈ ಹೊಸ ವರ್ಷದಿ.
ಸಮಸ್ತ ತಾಪವನ್ನು
ನಮ್ಮಿಂದ ನೀಗಿಸಿ.
ನಿನ್ನಯ ಚಿತ್ತ ರೀತಿ
ನಮ್ಮನ್ನು ನಡಿಸು.
ವಿಶುದ್ಧಿ ಭಕ್ತಿ ಪ್ರೀತಿ
ನಮ್ಮಲ್ಲಿ ಹೆಚ್ಚಿಸು.

Go to top