Verse 1

ಇಲ್ಲಿದ್ದೇವೆ ಯೇಸು
ಹೋದ ವರ್ಷದಿಂದ
ಬಂದು ನಿನ್ನ ದಯದಿಂದ.
ಎಷ್ಟೋ ಮಂದಿ ಇಲ್ಲ
ಹೋಗಿ ಬಿಟ್ಟಿದ್ದಾರೆ
ನಿನ್ನ ಮುಂದೆ ಸೇರಿದ್ದಾರೆ.
ದೇವರೇ
ಬೇಗನೇ
ತೀರೊದೆಮ್ಮ ಕಾಲ
ಬಿಡು ನಮ್ಮ ಸಾಲ.

Verse 2

ಕ್ಷಾಮ ವ್ಯಾದಿ ಯುದ್ಧ
ಮೊದಲಾದ ಕಷ್ಟ
ಅರ್ಥ ಮತ್ತು ಪ್ರಾಣ ನಷ್ಟ.
ಭ್ರಾತ್ರರಿಂಗೆ ತಾಗಿ
ದುಃಖ ಹುಟ್ಟಿದಲ್ಲಿ
ನೀನು ನಮ್ಮ ಸೀಮೆಯಲ್ಲಿ.
ತಂದೆಯೇ
ದೇವರೇ
ಇಟ್ಟಿ ಸಮಾಧಾನ
ಕೊಟ್ಟಿ ಅನ್ನಪಾನ.

Verse 3

ಇದು ನಮ್ಮ ಪುಣ್ಯ
ನಿನ್ನ ದಯವಲ್ಲ
ಎಂತ ಯಾರು ಹೇಳ ಬಲ್ಲ?
ನಿನ್ನ ಪ್ರೀತಿ ಎಷ್ಟು?
ಎಷ್ಟು ನಮ್ಮ ಪಾಪ?
ನೀನು ನಮಗೇನೂ ಶಾಪ
ಕೊಡದೆ
ಸೈರಣೆ
ಪ್ರೇಮ ಮಾತ್ರವಿಟ್ಟಿ
ಕೋಪವೆಲ್ಲ ಬಿಟ್ಟಿ.

Verse 4

ಇಂಥ ದೀರ್ಘಶಾಂತಿ
ಹೋದ ವರ್ಷದಲ್ಲಿ
ನಿತ್ಯ ಪ್ರತಿಕ್ಷಣದಲಿ.
ಹೊಂದುತ್ತಿದ್ದ ಮೇಲೆ
ಸ್ತೋತ್ರಗೀತ ಹಾಡ
ನಿಂಗೆ ನಮಸ್ಕಾರ ಮಾಡ
ಬಂದೆವು
ಲಕ್ಷಿಸು
ನಮ್ಮ ದೀನ ಸೇವೆ
ಅಡ್ಡ ಬೀಳುತೇವೆ.

Verse 5

ಮೂಡಿಸೆಮ್ಮ ಮೇಲೆ
ಹೊಸದೊಂದು ವರ್ಷ
ಅದರಲ್ಲಿ ಆತ್ಮಹರ್ಷ.
ನಿನ್ನ ಮಾತಿನಂತೆ
ನಮ್ಮ ಕೂಡ ಇದ್ದು
ನಿನ್ನ ಮಕ್ಕಳನ್ನು ತಿದ್ದು.
ಕರ್ತನೆ
ಕಡೆಗೆ
ಸೇರಿಸೆಮ್ಮನ್ನಲ್ಲಿ
ಸ್ವರ್ಗದ್ವಾರದಲ್ಲಿ.

Go to top