ಆದಿಕಾಂಡ 3:19
ನೀನು ಮಣ್ಣಿಗೆ ತಿರುಗುವ ವರೆಗೆ ನಿನ್ನ ಹಣೆಯ ಬೆವರನ್ನು ಸುರಿಸಿ ರೊಟ್ಟಿಯನ್ನು ತಿನ್ನುವಿ. ಯಾಕಂದರೆ ನೀನು ಅದ ರೊಳಗಿಂದ ಅಂದರೆ (ಮಣ್ಣಿನೊಳಗಿಂದ) ತೆಗೆಯ ಲ್ಪಟ್ಟೆ; ನೀನು ಮಣ್ಣಾಗಿದ್ದಿ, ಮಣ್ಣಿಗೆ ತಿರುಗಿಕೊಳ್ಳುವಿ ಅಂದನು.
 
ರೋಮಾಪುರದವರಿಗೆ 5:12
ಈ ವಿಷಯ ಹೇಗಂದರೆ, ಒಬ್ಬ ಮನುಷ್ಯ ನಿಂದಲೇ ಪಾಪವೂ ಪಾಪದಿಂದ ಮರಣವೂ ಲೋಕ ದೊಳಗೆ ಸೇರಿದವು; ಎಲ್ಲರೂ ಪಾಪಮಾಡಿದ್ದರಿಂದ ಮರಣವು ಹೀಗೆ ಎಲ್ಲರಲ್ಲಿಯೂ ವ್ಯಾಪಿಸಿತು.

ಯೋಬನು 21:32
ಅವನು ಸಮಾಧಿಗಳಿಗೆ ಒಯ್ಯಲ್ಪಡು ವನು; ಗೋರಿಯ ಮೇಲೆ ಇರುವನು.

ಪ್ರಸಂಗಿ  3:20
ಎಲ್ಲವೂ ಒಂದೇ ಸ್ಥಳಕ್ಕೆ ಹೋಗುತ್ತವೆ; ಎಲ್ಲವು ಗಳೂ ಮಣ್ಣಿನವುಗಳೇ ಮತ್ತು ಎಲ್ಲವೂ ಮಣ್ಣಿಗೆ ಸೇರುತ್ತವೆ.

ಪ್ರಸಂಗಿ  9:5
ಬದುಕಿರುವವರು ತಾವು ಸಾಯುತ್ತೇವೆಂದು ತಿಳಿದಿ ದ್ದಾರೆ; ಆದರೆ ಸತ್ತವರಿಗೆ ಏನೂ ತಿಳಿಯದು. ಇಲ್ಲವೆ ಅವರಿಗೆ ಇನ್ನು ಮೇಲೆ ಪ್ರತಿಫಲವೇನೂ ಇರದು. ಅವರ ಜ್ಞಾಪಕವು ಮರೆತುಹೋಗಿದೆ.

ಯೋಬನು  14:14-15
14  ಮನುಷ್ಯನು ಸತ್ತರೆ ಅವನು ತಿರುಗಿ ಬದುಕುವನೋ? ನನಗೆ ನೇಮಕ ಮಾಡಿದ ಸಮಯದ ದಿನಗಳೆಲ್ಲಾ ನನಗೆ ಬದಲು ಬರುವ ವರೆಗೆ ನಾನು ಕಾದುಕೊಂಡಿರುವೆನು.
15  ನೀನು ಕರೆಯುವಿ, ನಾನು ನಿನಗೆ ಉತ್ತರಕೊಡುವೆನು; ನಿನ್ನ ಕೈಕೆಲಸವನ್ನು ಬಯಸುವಿ.

ಯೋಬನು 19:25-26
25  ನನ್ನ ವಿಮೋಚಕನು ಜೀವಿಸುತ್ತಾನೆಂದೂ ಆತನು ಕಡೆಯ ದಿನದಲ್ಲಿ ಭೂಮಿಯ ಮೇಲೆ ನಿಲ್ಲುವನೆಂದೂ ತಿಳಿದಿದ್ದೇನೆ;
26  ನನ್ನ ಚರ್ಮದ ಹುಳಗಳು ಈ ದೇಹ ವನ್ನು ನಾಶಪಡಿಸಿದಾಗ್ಯೂ ನಾನು ನನ್ನ ಶರೀರದಿಂದ ದೇವರನ್ನು ನೋಡುವೆನು.
 
Go to top