Verse 1

ಅಕ್ಕತಂಗಿಯಂದಿರ
ಶಾಂತಮಯ ಮನೆಯ
ಜಡ ಸೇರಿ ಕಾಡಿತು
ಮುದ್ದು ಪ್ರಾಣ ಹೋಯಿತು.

Verse 2

ಮರಿಯಳು ಮಾರ್ಥಳು
ದುಃಖದಲ್ಲಿ ಬಿದ್ದರು
ಮಿತ್ರನಾದ ಕ್ರಿಸ್ತನು
ಬಹು ದೂರವಿದ್ದನು.

Verse 3

ಯೇಸು ಜಡವಾರ್ತೆಯ
ಕೇಳಿ ತಡ ಮಾಡಿದ
ಯಾಕೆ ಕೇಳಿದಾಕ್ಷಣ
ಬರಲಿಲ್ಲ ರಕ್ಷಕ?

Verse 4

ಸರ್ವ ರೋಗ ಪೀಡೆಯ
ಮೂಲ ಬಲ್ಲ ಒಡೆಯ
ತಡ ಮಾಡಿ ಹೊರಟು
ಕರ್ತ ಹೀಗೆ ಹೇಳಿದ್ದು.

Verse 5

ಸಾಯಲಿಲ್ಲ ಮಿತ್ರನು
ನಿದ್ದೆಗೈಯುತಿರ್ಪನು”.
ಹೀಗೆ ಹೇಳಿದಾತನು
ಈಗ ಬೇರೆ ಹೇಳನು.

Verse 6

ಅಳಬೇಡಿ ಪ್ರಿಯರೇ
ದುಃಖಾಕ್ರಾಂತ ಭಕ್ತರೇ
ಯೇಸುವಿನ ನುಡಿಯು
ಎಂದೂ ಹುಸಿಯಾಗದು.

Verse 7

ಯೇಸು ಅಲ್ಲಿ ಬಂದನು
ಬಾರೋ ಲಾಜರನ್ನಲು
ಅಣ್ಣ ಗೋರಿಯಿಂದಲೇ
ಎದ್ದು ಬಂದನೀಚೆಗೆ.

Verse 8

ಸರ್ವ ಸೃಷ್ಟಿ ಕರ್ತನು
ನಿದ್ದೆಗೈಸಿದವನು
ತಾನೇ ನಾಳೆ ಬಪ್ಪನು
ಏಳು ಎಂತ ಹೇಳ್ವನು.

Verse 9

ಯೇಸುವಿನ ಕರೆಯ
ಕೇಳಿ ನಮ್ಮ ಸ್ನೇಹಿತ
ತನ್ನ ಗೋರಿ ಒಡೆದು
ಜೀವದಿಂದಲೇಳ್ವನು.

Verse 10

ಅದು ನೆಪ್ಪು ಮಾಡುವಾ
ಯೇಸುವಾಕ್ಯ ನಂಬುತಾ
ಕಡು ದುಃಖ ಶೋಕವ
ಬಿಟ್ಟಾ ದಿನ ಕಾಯುವ.

Go to top