Verse 1

ಮೃತ್ಯುವೇ ಈ ಘಟವನ್ನು
ನೀನು ಒಡೆದಿಟ್ಟರು
ಕೊಲ್ಲಲಾರಿ ಆತ್ಮವನ್ನು
ನನ್ನ ಸಾಲ ಸಂದಿತು
ಯೇಸು ಮಧ್ಯವರ್ತಿಯು
ನನಗಾಗಿ ಸತ್ತನು.

Verse 2

ಆತ ತನ್ನ ರಕ್ತ ಚೆಲ್ಲಿ
ನೀತಿಗಾಗಿ ಏಳಲು
ರಕ್ತಬಂಧುಜನರಲ್ಲಿ
ಸ್ಥಳವೆನಗಾಯಿತು.
ರಕ್ತ ಬಲಿಯಿಂದಲೆ
ನಾನು ಜೀವ ಹೊಂದಿದೆ.

Verse 3

ನನ್ನ ಮರ್ತ್ಯ ದೇಹವನ್ನು
ರೋಗ ತಿಂದು ಬಿಟ್ಟರೆ
ಹ್ಯಾಗೂ ಒಂದೆ ನುಡಿಯನು
ಗಟ್ಟಿ ಹಿಡುಕೊಳ್ಳುವೆ
ಜೀವವುಳ್ಳ ಕರ್ತನು
ನನ್ನ ಜೀವಮೂಲವು.

Verse 4

ಸಾಯುವಾಗ ಜೀವಪಾನ
ಕೊಡು ಪ್ರೀಯ ಕರ್ತನೆ
ನಿನ್ನ ಪಂಚ ಗಾಯ ಧ್ಯಾನ
ಮಾಡಿ ನಿದ್ರೆ ಗೈಯುವೆ.
ಯೇಸು ನಿನ್ನ ನೀತಿಯು
ನನ್ನ ಶ್ವೇತ ವಸ್ತ್ರವು.

Go to top