Verse 1

ಸ್ವಾಮಿ ನೀನು ನನ್ನ ಪ್ರಾಣ
ಕೊಟ್ಟು ರಕ್ಷಿಪ್ಪಾತನು
ಮತ್ತು ಪ್ರಾಣ ವೈಯೊ ತ್ರಾಣ
ಬೇರೆ ಯಾರಿಗಿಲ್ಲವು
ಕೂಡು ಮಣ್ಣಿಗನ್ನಲಿಕ್ಕೆ
ನಾವು ಶಕ್ತರಾದೇವೋ?
ನಿನ್ನ ಚಿತ್ತವಾಗಲಿಕ್ಕೆ
ಅಡ್ಡಿ ಮಾಡಬಹುದೋ?

Verse 2

ಸ್ವಾಮಿ ತನ್ನ ಚಿತ್ತದಂತೆ
ಇಂದು ಇಲ್ಲಿ ಮಾಡಿದ.
ನಾವು ಕೋರಿ ಬೇಡಿದಂತೆ
ಎಲ್ಲ ಕಾಲ ನಡಿಸ.         
ಮಗುವಿನ ಹಿತವನ್ನು
ತಾಯಿ ಕೊಂಚ ಬಲ್ಲಳು.
ಎಷ್ಟೋ ಹೆಚ್ಚಿಗೆ ಅದನ್ನು
ತಂದೆ ದೇವ ಬಲ್ಲನು.

Verse 3

ಆಶಾಹೀನ ಜನರಾಗಿ
ದುಃಖ ಮಾಡಬಾರದು
ಯೇಸು ಮೃತ್ಯುಂಜಯನಾಗಿ
ನಾಳೆ ಎಬ್ಬಿಸುವನು.      
ಇದನ್ನೀಗ ನಂಬಿಕೊಂಡು
ಮನಶ್ಯಾಂತಿಗೊಳ್ಳುತಾ
ಸ್ವಾಮಿ ದಿನ ಕಾದುಕೊಂಡು
ಮೌನವ್ರತ ತಾಳುವಾ.

Verse 4

ನಾವು ಯೇಸು ಮೋರೆಯನ್ನು
ಇಹದಲ್ಲಿ ಕಾಣೆವು
ಜಡಮಯಲೋಕವನ್ನು
ಬಿಟ್ಟು ಹೋದನಂತ್ರವು
ಆತನನ್ನು ನಮ್ಮ ದೃಷ್ಟಿಯಿಂದ
ನೋಡಿಕೊಂಬೆವು
ಆಗ ಪರಿಪೂರ್ಣ ತುಷ್ಟಿ
ಹೊಂದಿ ಧನ್ಯರಹೆವು.

Go to top