Verse 1

ನಮ್ಮಾಪ್ತ ನೇ/ಳೇ ವಿಶ್ರಾಂತಿಯಾಗಿರು
ಸುಶಾಂತಿಯಿಂದಲೀಗ ಮಲಗು
ಕ್ರಿಸ್ತ್ಯೇಸು ಕರೆಯುವ ಮಟ್ಟಿಗು
ನಿದ್ದೆ ಮಾಡು ಮಾಡು.

Verse 2

ನೀ ಕೂಸಿನಂತೆ ತಾಯಿಯೆದೆಗೆ
ಈಗಾತುಕೊಂಡಿರು ನಮ್ಮಾಪ್ತ ನೇ/ಳೇ
ಇನ್ನೆಂದೂ ತಾಗದೊಂದೂ ವೇದನೆ
ನಿದ್ದೆ ಮಾಡು ಮಾಡು.

Verse 3

ಈ ಲೋಕದಂಧಕಾರ ಮುಗಿದು
ಸಮಾಧಿ ಸೀಳಿ ಹೋಗುವಾಗಲು
ಸಜ್ಜೀವ ಹೊಂದಿ ಎಳೊ ಮಟ್ಟಿಗೂ
ನಿದ್ದೆ ಮಾಡು ಮಾಡು.

Verse 4

ಮೇಲೊಕದಲ್ಲಿ ಕೂಡೊ ಮಟ್ಟಿಗೂ
ಸುದಾಸರೆಲ್ಲರಿಂಗೆ ಕರ್ತನು
ನಿರ್ಲಯ ಮುಡಿ ಇಡೊ ಮಟ್ಟಿಗೂ
ನಿದ್ದೆ ಮಾಡು ಮಾಡು.

Go to top