Verse 1

ಜೀವ ಯಾತ್ರೆಯಲ್ಲಿ ಎಷ್ಟೋ ದುಃಖ
ಭ್ರಾತ ಸತ್ತ ನಿನಗೆಷ್ಟೊ ಸುಖ
ನಾ ಕಷ್ಟದಾಳು
ನಿನಗ್ಯೇಸುವಲ್ಲಿ ಒಳ್ಳೆ ಬಾಳು.

Verse 2

ಕೆಟ್ಟ ಸೆರೆಯಲ್ಲಿ ಬಿದ್ದೆನಲ್ಲ?
ನನ್ನ ದುಃಖ ಎಣಿಸಾರು ಬಲ್ಲ?
ಈ ಜೀವ ಅತಿ
ಚಿಂತೆಯುಳ್ಳ ವ್ಯಥೆಮಯ ಗತಿ.

Verse 3

ನಿಂಗೆ ಭ್ರಾತ ತೀರಿತೆಲ್ಲ ಭ್ರಾಂತಿ
ನಿನಗಾಯ್ತು ನಿತ್ಯವಾದ ಶಾಂತಿ
ವಿಶ್ರಾಂತಿಯಲ್ಲಿ
ಸೇರಿ ಸತ್ಯ ಸುಖ ಪಡ ಬಲ್ಲಿ.

Verse 4

ಯೇಸು ಒರಸೋನು ಅಶ್ರುವನ್ನು
ಈಯ್ವನಾತನಿಷ್ಟಪೂರ್ತಿಯನ್ನು
ಆ ಸ್ಥಾನದಲ್ಲಿ
ನಿದ್ದೆ ಮಾಳ್ಪಿ ಯೇಸು ಜೋಕೆಯಲ್ಲಿ.

Verse 5

ವ್ಯರ್ಥ ಚಿಂತೆ ಪಡುತಿರ್ವದೇಕೆ?
ಮೋಕ್ಷದಲ್ಲಿ ಸೇರದಿರೋದೇಕೆ?
ಸಾಕಾಯ್ತು ಕಷ್ಟ
ಬೇಡ ನಂಗೆ ನಿಜಪ್ರಾಣನಷ್ಟ.

Verse 6

ಕರ್ತ ಬಂದು ನೊಗ ಬಿಚ್ಚಿ ಹಾಕು
ಬಿಡಿಸೆನ್ನ ಹೊತ್ತ ಹೊರೆ ಸಾಕು
ನಿನ್ನೈಕ್ಯ ಲೇಸು
ಹೃದದಿಷ್ಟ ಸೂರ್ಯ ನೀನೆ ಯೇಸು.

Go to top