Verse 1

ಸುಶಾಂತ ನಿದ್ರೆ ಮಾಡುತ್ತಿ
ಹೋರಾಟ ತೀರಿಸಿ
ವಿಶ್ರಾಂತಿಗೊಂಡಿ ಮಲಗಿ
ಕ್ರಿಸ್ತ್ಯೇಸುಹಸ್ತದಿ.

Verse 2

ಸಂಕಷ್ಟ ನಿನಗೋಸ್ಕರ
ತಾಳ್ದಂಥ ರಕ್ಷಕ
ಸಮಾಪ್ತ ಎಂತ ಜೋಗುಳ
ನಿನ್ನಾತ್ಮಕ್ಹಾಡಿದ.

Verse 3

ನೀನಿಗ ಭೂಮಿಯೊಳಗೆ
ಕಾಳಾಗಿ ಬೀಳುತಿ
ಸೌಂದರ್ಯರೂಪವಾಗಿಯೆ
ಆ ಮೇಲೆ ಏಳುವಿ.

Verse 4

ನಿನ್ನತಿಪ್ರಿಯ ಮುಖವ
ಮಣ್ಣಡಗಿಸಲಿ
ನಿನ್ನಾತ್ಮಕೀಗಲುತ್ತಮ
ತೃಪ್ತ್ಯಾಯ್ತು ಪರದಿ.

Verse 5

ನಾವಿನ್ನು ಕೀಳ ಲೋಕದಿ
ದೇಶಾಂತ್ರ ಜನರೆ
ನಮ್ಮನ್ನು ಕರ್ತ ದಾಟಿಸಿ
ವೈ ನಿನ್ನ ಕಡೆಗೆ.

Go to top