Verse 1

ಈ ಶರೀರ ಭೂಮಿಯಲ್ಲಿ
ಶಾಂತ ನಿದ್ದೆ ಮಾಡಲಿ
ಚಿಂತೆ ಇಲ್ಲ ಕಡೆಯಲ್ಲಿ
ಕರ್ತನದನೆಬ್ಬಿಸಿ
ಗೋರಿಯಿಂದ ಕರೆಯೋನು
ತಾನಿರ್ವಲ್ಲಿ ಸೇರಿಸೋನು.

Verse 2

ಸ್ವಾಮ್ಯವಯವಂಗಳನ್ನು
ಮೃತ್ಯು ಹಿಡುಕೊಳ್ಳದು
ಕರ್ತ ತನ್ನ ಶ್ವಾಸವನ್ನು
ಬೂದಿ ಮೇಲೆ ಬಿಡಲು
ಕೊಳತದ್ದು ಚಿಗುರೀತು
ಸತ್ತ ದೇಹ ಜೀವಿಸೀತು.

Verse 3

ಯೇಸು ಸಾವಿನಿಂದಲೆದ್ದು
ಸಾವಿನಧಿಕಾರವ
ಹೊಂದಿದವನನ್ನು
ಗೆದ್ದು ತನ್ನ ಭಕ್ತಜನರ
ನಿತ್ಯಕ್ಷೇಮಪೂರ್ತಿಯಲ್ಲಿ
ಸೇರಿಸೋನು ದಿವದಲ್ಲಿ.

Go to top