Verse 1

ಯೇಸು ಕ್ರಿಸ್ತ ನಮಗೆ
ಕೊಟ್ಟ ಸ್ವರ್ಗದಲ್ಲಿಯೆ
ನಮ್ಮ ಪಟ್ಣವಾಸವು
ನಮ್ಮ ಹೃದದಾಶೆಯು.

Verse 2

ಇಲ್ಲಿ ಅಲ್ಲಿ ಒಬ್ಬನು
ನಿತ್ಯ ಗೃಹ ಸೇರಲು
ಮಿತ್ರಬಂಧು ಜನರು
ದುಃಖಗೊಂಡು ಅಳೋರು.

Verse 3

ಆದರೆಮ್ಮ ದೇವರು
ತಪ್ಪು ಮಾಡಲಾರನು
ಅದಕೆಮ್ಮ ಹೃದವು
ಶಾಂತವಾಗ ತಕ್ಕದು.

Verse 4

ಅತಿಪ್ರಿಯವಾದದು
ಒಂದು ಹೃತ್ತು ಸತ್ತರು
ಸ್ವಂತ ಜೀವ ಹೋದರು
ಯೇಸು ಪ್ರೀತಿ ಹೋಗದು.

Verse 5

ಸಾವು ಬರೇ ನಿದ್ರೆಯು
ಎಂದು ಧೈರ್ಯಗೊಳ್ವೆವು
ಸ್ವರ್ಗದಲ್ಲಿ ನಿತ್ಯವು
ಮಿತ್ರರೈಕ್ಯವಹುದು.

Go to top