ಲೂಕನು 2:1-7
1 ಆದಿನಗಳಲ್ಲಿ ಆದದ್ದೇನಂದರೆ ಲೋಕವೆಲ್ಲಾ ಖಾನೇಷುಮಾರಿ ಬರೆಯಿಸಿಕೊಳ್ಳಬೇಕೆಂದು ಕೈಸರನಾದಔಗುಸ್ತನಿಂದ ಆಜ್ಞೆಯು ಹೊರಟಿತು.
2 ಕುರೇನ್ಯನುಸಿರಿಯಾಕ್ಕೆ ಅಧಿಪತಿಯಾಗಿದ್ದಾಗ ಈ ಖಾನೇಷುಮಾರಿಯು ಮೊದಲನೆಯ ಸಾರಿ ನಡೆ ಯಿತು.
3 ಆಗಎಲ್ಲರೂ ಖಾನೇಷುಮಾರಿ ಬರೆಯಿಸಿ ಕೊಳ್ಳುವದಕ್ಕಾಗಿ ತಮ್ಮ ತಮ್ಮ ಸ್ವಂತ ಪಟ್ಟಣಕ್ಕೆಹೋದರು.
4 (ಯೋಸೇಫನುದಾವೀದನ ಮನೆತನ ದವನೂ ವಂಶದವನೂ ಆಗಿದ್ದದರಿಂದ) ಅವನು ಸಹ ಗಲಿಲಾಯದ ನಜರೇತೆಂಬಪಟ್ಟಣದಿಂದ ಯೂದಾ ಯದಲ್ಲಿ ಬೇತ್ಲೆಹೇಮ್ ಎಂದು ಕರೆಯಲ್ಪಟ್ಟ ದಾವೀದನ ಪಟ್ಟಣಕ್ಕೆ
5 ತನಗೆನಿಶ್ಚಯಮಾಡಲ್ಪಟ್ಟಿದ್ದ ಮತ್ತು ಪೂರ್ಣ ಗರ್ಭಿಣಿಯಾಗಿದ್ದ ಮರಿಯಳೊಂದಿಗೆ ಖಾನೇಷುಮಾರಿಬರೆಸಿಕೊಳ್ಳುವದಕ್ಕಾಗಿ ಹೋದನು.
6 ಹೀಗೆಅವರು ಅಲ್ಲಿ ಇದ್ದಾಗ ಆಕೆಗೆ ಹೆರಿಗೆಯ ದಿವಸಗಳು ಪೂರ್ಣವಾದವು.
7 ಆಕೆಯುತನ್ನ ಚೊಚ್ಚಲು ಮಗನನ್ನು ಹೆತ್ತು ಬಟ್ಟೆಗಳಿಂದ ಸುತ್ತಿ ಛತ್ರದಲ್ಲಿ ಅವರಿಗೆಸ್ಥಳವಿಲ್ಲವಾದ್ದರಿಂದ ಆತನನ್ನು ಗೋದ ಲಿಯಲ್ಲಿ ಮಲಗಿಸಿದಳು.