Verse 1

ಒಂದು ಊರಿನಲ್ಲಿ
ಒಂದು ಬೆಳಕು.
ಅಂಧಕಾರದಲ್ಲಿ
ತೋರಲಾಯಿತು.
ಬೇತ್ಲೆಹೆಮಿನಲ್ಲಿ
ನೀತಿಸೂರ್ಯನು
ಪಾಪ ಕತ್ತಲಲ್ಲಿ
ಕಾಂತಿ ಹೊಯ್ದನು.

Verse 2

"ದೇವರಿಂಗೆ ಮಾನ
ಊರ್ಧ್ವ ಲೋಕದಿ.
ನಿತ್ಯ ಸಮಾಧಾನ
ಭೂಮಿಗಿರಲಿ."
ಎಂಬ ಗೀತವನ್ನು
ದೂತಸೇನೆಯು
ಹಾಡಿ ಲೋಕವನ್ನು
ಹರಸಿದುದು.

Verse 3

ಈಗ ನರರಲ್ಲಿ
ದಿವ್ಯ ಕೃಪೆಯು.
ಎಲ್ಲ ಭೂಮಿಯಲ್ಲಿ
ದೊಡ್ಡದಾಯಿತು.
ಈಗ ಶುದ್ಧ ನೀತಿ
ಸುಖಪ್ರಭೆಯು
ಸತ್ಯವಾದ ಪ್ರೀತಿ
ನೆಲೆಗೊಂಡವು.

Verse 4

ಬೇತ್ಲೆಹೆಮಿನಲ್ಲಿ
ನಮ್ಮ ಯೇಸುವು
ಮರ್ತ್ಯ ರೂಪದಲ್ಲಿ
ಹುಟ್ಟುವಾಗಲು.
ಜೀವದ ಪ್ರಕಾಶ
ಮೂಡಿ ತೋರಲು
ಮೃತ್ಯುಕ್ರೂರಪಾಶ
ಬಿಚ್ಚಿ ಹೋಯಿತು.

Go to top