Verse 1

ಹರ್ಷವಾಗು ಕ್ರೈಸ್ತಗೋತ್ರ
ಹರ್ಷಗೊಳ್ಳು ಸಭೆಯೇ
ಪ್ರೀತಿಯಬ್ಧಿ ದೇವರೇ.
ನಿನಗೇಳಲೆಮ್ಮ ಸ್ತೋತ್ರ
ದೇವಪುತ್ರ ಹುಟ್ಟಿದ
ಸೇರಿ ನಮ್ಮ ಗೋತ್ರವ.
ಹರ್ಷ ಹರ್ಷ ಅತಿ ಹರ್ಷ.
ಮೂಡಿತಿಂದು ಕೃಪಾವರ್ಷ.
ಜಯ ಜಯ ಸುವಿಜಯ.
ಹುಟ್ಟಿತಿಂದು ದೇವದಯ.

Verse 2

ದೃಷ್ಟಿಸೊ ನನ್ನಂತಃ ಪ್ರಾಣ
ಪ್ರೀತಿರಾಜ ರಕ್ಷಕ
ಬಂದ ನಿನಗೋಸ್ಕರ.
ಮಾಡಿ ಭೂಮಿಯ ಪ್ರಯಾಣ
ಶಿಶುವಾಗಿ ಹುಟ್ಟಿದ
ತನ್ನ ರಕ್ತ ಚೆಲ್ಲಿದ.
ಹರ್ಷ ಹರ್ಷ ಅತಿ ಹರ್ಷ.
ಮೂಡಿತಿಂದು ಕೃಪಾವರ್ಷ.
ಜಯ ಜಯ ಸುವಿಜಯ.
ಹುಟ್ಟಿತಿಂದು ದೇವದಯ.

Verse 3

ಯೇಸು ಹ್ಯಾಗೀ ಉಪಕಾರ
ಯೋಗ್ಯವಾಗಿ ಹೇಳಲಿ?
ಜೀವ ಕೊಟ್ಟಿ ನಿನ್ನಲಿ.
ಮಾಡಿ ಮೃತ್ಯು ಪರಿಹಾರ
ನಾನು ಎಡೆಬಿಡದೆ
ನಿನ್ನ ದಾಸನಿರುವೆ.
ಹರ್ಷ ಹರ್ಷ ಅತಿ ಹರ್ಷ.
ಮೂಡಿತಿಂದು ಕೃಪಾವರ್ಷ.
ಜಯ ಜಯ ಸುವಿಜಯ.
ಹುಟ್ಟಿತಿಂದು ದೇವದಯ.

Verse 4

ಯೇಸು ಸ್ವಕುಟುಂಬವನ್ನು
ಕೃಪೆಯಿಂದ ನಡಿಸು
ಎಲ್ಲರನ್ನುದ್ಧರಿಸು.
ಸಾಕು ನಿನ್ನ ಮನೆಯನ್ನು
ಕೊಡು ದಿವ್ಯ ಶಾಂತಿಯ
ಶುಭವಾದ ವರುಷ.       
ಹರ್ಷ ಹರ್ಷ ಅತಿ ಹರ್ಷ.
ಮೂಡಿತಿಂದು ಕೃಪಾವರ್ಷ.
ಜಯ ಜಯ ಸುವಿಜಯ.
ಹುಟ್ಟಿತಿಂದು ದೇವದಯ.

Go to top