Verse 1

ಬೇಥ್ಲೇಮ ದನಹಟ್ಟಿಯಲ್ಲಿ
ಮನುಷ್ಯಪುತ್ರ ಹುಟ್ಟಲು.
ಸಮಸ್ತ ದೇವದೂರತಲ್ಲಿ
ಮಹಾಂತ ಹರ್ಷವಾಯಿತು.
ರಾತ್ರೀಲಿ ದೊಡ್ಡ ಸೇನೆಯಾಗಿ
ಕುರುಬರೊಳ್ಗೆ ಕಾಣಲಾಗಿ
ಆ ದಿವ್ಯ ದೂತರು
ಪ್ರಕಾಶಿಸಿದರು.
“ಕರ್ತಂಗೆ ಊರ್ಧ್ವದಲ್ಲಿ ಮಾನ
ಈ ಭೂಮಿಯಲ್ಲಿ ಸಮಾಧಾನ
ಮನುಷ್ಯರೊಳಗೆ ಆನಂದ
ಎಂದರು.

Verse 2

ಪಾಪಿಷ್ಠರಲ್ಲಿ ಪ್ರೀತಿ ಇಟ್ಟು
ನಮ್ಮಲ್ಲಿ ಯೇಸು ಬಂದನು.
ಅತ್ಯುನ್ನತೀಯ ಸ್ಥಾನ ಬಿಟ್ಟು
ಈ ಭೂಮಿಲೋಕಕಿಳಿದು.
ಸ್ವರಾಜ್ಯ ಸ್ಥಾಪನಾದಿ ಮಾಡಿ
ಸೈತಾನನೊಡ ಹೋರಾನಾಡಿ
ಅಘೋರ ಯುದ್ಧದಿ
ಸಜಯ ಎದ್ದನು.
ಓಲಾಗಿ ಯೇಸು ಕ್ರೂಜೆಯಲ್ಲಿ
ಪವಿತ್ರ ರಕ್ತವನ್ನು ಚೆಲ್ಲಿ
ಸತ್ತೆದ್ದನಾಗಲೆ
ಸಜೀವಪತಿಯು.

Verse 3

ನೀ ಯೇಸು ಭಕ್ತರೊಳ್ಗೆ ಹುಟ್ಟಿ
ನಿವಾಸಿಯಗು ನಿತ್ಯಕು.
ಅಶುದ್ಧ ನಮ್ಮ ಹೃದ ಮುಟ್ಟಿ
ಕಳಂಕವೆಲ್ಲ ಬಿಡಿಸು.
ಕಾಪಾಡಿ ನಿನ್ನ ಸಭೆಯನ್ನು
ಮಾಡೊಳ್ಳೆ ರಾಜ್ಯಭಾರವನ್ನು
ಅಮಿತ್ರನಾಶಕೆ
ಸಹಾಯ ಕಳುಹು.
ನಿನ್ನಂತ್ಯ ಜಯದಿನದಲ್ಲಿ
ಮಹತ್ವವುಳ್ಳ ಪ್ರಭೆಯಲ್ಲಿ
ನಿನ್ನನ್ನು ಕಂಡರೆ
ಸಂತೋಷ ತೀರದು.

Go to top