Verse 1

ಅತಿ ಶುಭ ರಾತ್ರೀಲಿ
ಆದ ಕಾರ್ಯ ಕೇಳಿರಿ
ದೇವಪುತ್ರ ನರನಾಗಿ
ಹುಟ್ಟಿದ್ದಾನೆ ಹರ್ಷವಾಗಿ
ದೂತಸೈನ್ಯದೊಡನೆ
ಹಾಡಿರೆಲ್ಲ ಕ್ರೈಸ್ತರೆ.

Verse 2

ಪಾಪಿ ಸೇರು ಆತನ್ನೇ
ರಕ್ಷಾಕರ್ತ ಬೇಡವೇ?
ನಿನಗಾಗಿ ಬಂದನಲ್ಲ
ನಿತ್ಯಜೀವ ಕೊಡ ಬಲ್ಲ.
ಆತನಲ್ಲಿ ನಂಬಿರು
ನಿನ್ನ ರಾತ್ರಿ ಹೋಗೋದು.

Verse 3

ದೇವರಿಂಗೆ ಮಹಿಮೆ
ಸಮಾಧಾನ ಭೂಮಿಗೆ
ದಯ ನರಪುತ್ರರಲ್ಲಿ
ಎಂಬದಾಯ್ತಾ ರಾತ್ರಿಯಲ್ಲಿ
ನೋಡಿರೆಷ್ಟೋ ದೊಡ್ಡದು
ಉಂಟೀ ರಾತ್ರಿ ಫಲವು.

Go to top