1 ಕೊರಿಂಥದವರಿಗೆ 15:3-4
3   ನಾನು ಸಹ ಎಲ್ಲಾದಕ್ಕಿಂತಲೂ ಮೊದಲು ಹೊಂದಿದ್ದನ್ನು ನಿಮಗೆ ತಿಳಿಸಿದ್ದೇನೆ. ಅದೇನಂದರೆ, ಬರಹದ ಪ್ರಕಾರ ಕ್ರಿಸ್ತನು ನಮ್ಮ ಪಾಪಗಳಿಗಾಗಿ ಸತ್ತನು.
4   ಹೂಣಲ್ಪಟ್ಟನು; ಬರಹದ ಪ್ರಕಾರವೇ ಆತನು ಮೂರನೆಯ ದಿನದಲ್ಲಿ ತಿರಿಗಿ ಎದ್ದುಬಂದನು.

1 ತಿಮೊಥೆಯನಿಗೆ 2:5-6
5   ಯಾಕಂದರೆ ದೇವರು ಒಬ್ಬನೇ;ದೇವರಿಗೂ ಮನಷ್ಯರಿಗೂ ಮಧ್ಯಸ್ಥನು ಒಬ್ಬನೇ; ಆತನು ಮನುಷ್ಯನಾಗಿರುವ ಕ್ರಿಸ್ತ ಯೇಸುವೇ;
6   ಆತನು ಎಲ್ಲರಿಗೋಸ್ಕರ ವಿಮೋಚನೆಯ ಕ್ರಯವಾಗಿ ತನ್ನನ್ನು ತಾನೇ ಒಪ್ಪಿಸಿಕೊಟ್ಟನು; ಇದೇ ತಕ್ಕಕಾಲದಲ್ಲಿ ಹೇಳ ಬೇಕಾದ ಸಾಕ್ಷಿಯಾಗಿದೆ.

ಯೋಹಾನನು 20:31  
ಆದರೆ ಯೇಸುವೇ ದೇವಕುಮಾರ ನಾದ ಕ್ರಿಸ್ತನೆಂದು ನೀವು ನಂಬುವಂತೆಯೂ ನಂಬಿ ಆತನ ಹೆಸರಿನ ಮೂಲಕ ಜೀವವನ್ನು ಪಡೆದುಕೊಳ್ಳುವಂತೆಯೂ ಇವುಗಳು ಬರೆಯಲ್ಪಟ್ಟಿವೆ.

ಅಪೊಸ್ತಲರ ಕೃತ್ಯಗಳು 16:31  
ಅವರು--ಕರ್ತನಾದ ಯೇಸು ಕ್ರಿಸ್ತನ ಮೇಲೆ ನಂಬಿಕೆಯಿಡು, ಆಗ ನೀನು ರಕ್ಷಣೆ ಹೊಂದುವಿ, ನಿನ್ನ ಮನೆಯವರೂ ರಕ್ಷಣೆ ಹೊಂದು ವರು ಎಂದು ಹೇಳಿದರು.
 
Go to top