Verse 1

ಯೇಸು ನಮಗೆಂಥ ಮಿತ್ರ
ಎಂಥ ದಿವ್ಯ ಗುರುವು
ಎಲ್ಲಾ ಆತನ ಚರಿತ್ರ
ಪಾಪಿಗೆ ಸುವಾರ್ತೆಯು.
ತನ್ನಿ ತನ್ನಿ ಎಲ್ಲ ತನ್ನಿ
ಚಿಂತೆ ದುಃಖ ವೇದನೆ
ಬನ್ನಿ ಬನ್ನಿ ಮಾಡ ಬನ್ನಿ
ಯೇಸುವಿಂಗೆ ಪ್ರಾರ್ಥನೆ.

Verse 2

ಆತ್ಮವೈರಿ ಹತ್ರ ಬಂದು
ಮೋಸ ತಂತ್ರ ಗೈದರೆ
ರಕ್ಷಿಸೆನ್ನ ಯೇಸು ಎಂದು
ಬೇಡು ಭಯವಿಲ್ಲದೆ.
ನಮ್ಮ ಹತ್ರದಲ್ಲಿದ್ದಾನೆ
ಬಲ್ಲನೆಮ್ಮ ಶೋಧನೆ
ನಮ್ಮ ನಾದರಿಸುತ್ತಾನೆ
ಕೇಳಿ ನಮ್ಮ ಪ್ರಾರ್ಥನೆ.

Verse 3

ಸ್ವಂತ ಬಲ ನಿನಗಿಲ್ಲ
ಇಲ್ಲ ಬಂಧುಪ್ರೀತಿಯು
ನಂಬತಕ್ಕ ಪುಣ್ಯವಿಲ್ಲ
ಸಾವು ಮಾತ್ರ ಕಾಣಲು.
ಯೇಸು ನಿನಗಿರುತ್ತಾನೆ
ಆತ ನಂಬಿಗಸ್ತನೆ
ನಿನ್ನನಪ್ಪಿಕೊಳ್ಳುತ್ತಾನೆ
ಕೇಳಿ ನಿನ್ನ ಪ್ರಾರ್ಥನೆ.

Go to top