Verse 1

ಕಂಗೆಟ್ಟ ರೋಗಿ ಹಿಗ್ಗಿಕೋ
ಇದ್ಧಾನೆ ವ್ಶೆದ್ಯಗಾರ
ಕ್ರಿಸ್ತ್ಯೇಸುವಿಂದ ಹೊಂದಿಕೋ
ಸಂಕಷ್ಟ ಪರಿಹಾರ.
ಸ್ತುತ್ಯ ರಮ್ಯ ನಾಮವೇ
ಸತ್ಯ ಮಿತ್ರ ನಿನಗೆ
ನಿತ್ಯ ಸ್ತೋತ್ರ ಮಾಡುವೆ  
ಯೇಸು ಯೇಸು ಯೇಸು.

Verse 2

ಕಂಗಾಲ ಪಾಪಿ ಎದ್ದು ಬಾ
ಎಂದಾತನನ್ನುತಾನೆ
ಕಲ್ಯಾಣ ಹೊಂದಲೀಗ ಬಾ
ಆರೋಗ್ಯ ಮಾಡುತ್ತಾನೆ.
ಸ್ತುತ್ಯ ರಮ್ಯ ನಾಮವೇ
ಸತ್ಯ ಮಿತ್ರ ನಿನಗೆ
ನಿತ್ಯ ಸ್ತೋತ್ರ ಮಾಡುವೆ
ಯೇಸು ಯೇಸು ಯೇಸು.

Verse 3

ನಿಂಗೀಶ ಸ್ತೋತ್ರವಾಗಲಿ
ನೀ ಗೈದಿ ಪ್ರಾಯಶ್ಚಿತ
ಕ್ರೂಜೇಲಿ ಸಾವ ತಾಳಿದಿ
ಈ ಪಾಪಿಯ ನಿಮಿತ್ತ.
ಸ್ತುತ್ಯ ರಮ್ಯ ನಾಮವೇ
ಸತ್ಯ ಮಿತ್ರ ನಿನಗೆ
ನಿತ್ಯ ಸ್ತೋತ್ರ ಮಾಡುವೆ
ಯೇಸು ಯೇಸು ಯೇಸು.

Verse 4

ಸಹೋದರರೇ ಹಾಡಿರಿ
ಈ ಶ್ರೇಷ್ಠ ನಾಮವನ್ನು
ಸಹೋದರಿಯರೇಳಿರಿ
ಕೊಂಡಾಡಿರಾತನ್ನನು.
ಸ್ತುತ್ಯ ರಮ್ಯ ನಾಮವೇ
ಸತ್ಯ ಮಿತ್ರ ನಿನಗೆ
ನಿತ್ಯ ಸ್ತೋತ್ರ ಮಾಡುವೆ
ಯೇಸು ಯೇಸು ಯೇಸು.

Verse 5

ಆ ತೇಜೋಮಯ ಲೋಕದಿ
ಆತನ್ನ ನೋಡುವಾಗ
ಹಾಡೇವು ಹೆಚ್ಚುಲ್ಲಾಸಿಸಿ
ಲೇಸಾಗಿ ಕೀರ್ತಿರಾಗ.
ಸ್ತುತ್ಯ ರಮ್ಯ ನಾಮವೇ
ಸತ್ಯ ಮಿತ್ರ ನಿನಗೆ
ನಿತ್ಯ ಸ್ತೋತ್ರ ಮಾಡುವೆ
ಯೇಸು ಯೇಸು ಯೇಸು.

Go to top