Verse 1

ಯೇಸು ಪಾಪಿಗಾಸರ
ಈ ಸುವಾರ್ತಾವಾಕ್ಯವನ್ನು
ಹಾದಿ ತಪ್ಪಿದವರ
ಕಿವಿಗ್ಹೇಳಿ ಅವರನ್ನು
ಯೇಸುವಲ್ಲಿಗೊಯ್ಯುವ
ಯೇಸು ಪಾಪಿಗಾಸರ.

Verse 2

ಶಿಕ್ಷಾಪಾತ್ರರಾದರು
ಪಾಪಿನಾಶವಿಷ್ಟವಲ್ಲ
ಜೀವವೆನಗಿಷ್ಟವು
ಎಂದು ಆಣೆ ಇಟ್ಟನಲ್ಲ
ನಾಕದ್ವಾರ ತೆರೆದ
ಯೇಸು ಪಾಪಿಗಾಸರ.

Verse 3

ಕುರಿ ತಪ್ಪಿ ಹೋಗಲು
ಕಾಯುವಾತ ಬಿಡೊದಿಲ್ಲ.
ಒಳ್ಳೆ ಪಾಲ ಯೇಸುವು
ನಮ್ಮ ನಿನ್ನು ಬಿಡಲಿಲ್ಲ
ತಿರುಗೆಂದು ಕೂಗವ
ಯೇಸು ಪಾಪಿಗಾಸರ.

Verse 4

ದುಃಖಿಸುವ ಪಾಪಿಯೇ
ಸೇರು ಯೇಸು ಮರೆಯಲ್ಲಿ
ಯೇಸು ತಿದ್ದ ಶಕ್ತನೇ
ನಿರ್ಮಿಸೋನು ಪಾಪಿಯಲ್ಲಿ
ದೇವಪುತ್ರಭಾವವ
ಯೇಸು ಪಾಪಿಗಾಸರ.

Verse 5

ನಾನು ತಪ್ಪಿದವನೆ
ಕೆಟ್ಟು ಹೋದೆನೆಂದು ಹೇಳಿ
ಕ್ಲೇಶಪಟ್ಟು ಒಪ್ಪುವೆ
ಯೇಸುವಿನ ಧ್ವನಿ ಕೇಳಿ
ಬಂದೆನೀಗ ನಂಬುತ
ಯೇಸು ಪಾಪಿಗಾಸರ.

Verse 6

ಕೇಳು ಕೇಳು ಸ್ನೇಹಿತ
ನೀನು ಸಹ ಧೈರ್ಯಗೊಂಡು
ನಿನ್ನ ಪಾಪಭಾರವ
ಸ್ವಾಮಿ ಮೇಲೆ ಹಾಕಿಕೊಂಡು
ಶುದ್ಧವಾಗಲೆದ್ದು ಬಾ
ಯೇಸು ಪಾಪಿಗಾಸರ.

Verse 7

ತಪ್ಪಿಹೋದ ಮಗನು
ಆದ ನಾನು ಮತ್ತು ಬಂದು
ಯೇಸು ರಕ್ತವೆನಗು
ಪಾಪಕ್ಷಮೆ ಕೊಟ್ಟಿತೆಂದು
ಹರ್ಷಗೊಳ್ವೆ ಸರ್ವದಾ
ಯೇಸು ಪಾಪಿಗಾಸರ.

Go to top