Verse 1

ಒಳ್ಳೆ ಸುದ್ದಿ ಸಾರ
ಈಗ ಬಂದೆವು
ಅದು ಎಷ್ಟೊ ಸಾರ
ಎಂತ ಬಲ್ಲೆವು.
ಕೇಳಿ ನಂಬ ಬುದ್ದಿ
ಪ್ರೇರಿಸಾತ್ಮನೆ.  
ಎಲ್ಲಾ ವಿಘ್ನಬುದ್ದಿ
ಓಡಿಸಾಳ್ಮನೇ.

Verse 2

ಕೊಟ್ಟ ಬಾಷೆಯನ್ನು
ಅಪ್ಪಾ ಜ್ಞಾಪಿಸು
ಪೂರ್ತಿ ಮಾಡದನ್ನು
ಹೊಂದು ಹೆಸರು.
ನಮ್ಮ ಮಾನಕ್ಕಲ್ಲ
ನಿನ್ನ ಮಾನಕೆ
ಲಾಭ ನಮಗಲ್ಲ
ನಿನ್ನ ರಾಜ್ಯಕ್ಕೆ.

Verse 3

ನಮ್ಮ ಬಲ ಅಲ್ಪ
ಸರ್ವತ್ರಾಣಿಯೇ
ನಮ್ಮ ಬುದ್ಧಿ ಸ್ವಲ್ಪ
ಸರ್ವ ಜ್ಞಾನಿಯೇ.
ಬೇಕಾದಂಥ ಜ್ಞಾನ
ಪಾಲಿಸೆಮಗೆ.
ಪವಿತ್ರಾತ್ಮದಾನ
ಹೊಯ್ಯು ದೇವರೇ.

Verse 4

ನಿನ್ನದಲ್ಲೋ ರಾಜ್ಯ
ಯೇಸು ಕ್ರಿಸ್ತನೆ?
ನಮಗಿನ್ನು ವ್ಯಾಜ್ಯ
ಲೋಕದೊಳಗೆ.
ನಿನ್ನ ವೈರಿಕೀರ್ತಿ
ಯಾಕೆ ಹಬ್ಬೊದು?
ನಿಂಗೆ ಜಯಕೀರ್ತಿ
ಯಾಕೆ ತಪ್ಪೊದು?

Verse 5

ಸ್ವಾಮೀಸೇವೆಯಲ್ಲಿ
ಸೋಲಬಾರದು
ಯೇಸುಕೀರ್ತಿಯಲ್ಲಿ
ಕುಗ್ಗಬಾರದು.
ಶಿಷ್ಯರಲ್ಲಿ ಕಲೆ
ಇರಬಾರದು
ವೈರಿಗೇನು ಕಳೆ
ಸಿಕ್ಕಬಾರದು.

Verse 6

ದೀನನೇಳುವಂತೆ
ಪಾಪಿ ಬದುಕಿ
ಕ್ಷಮೆ ಹೊಂದುವಂತೆ
ನೀ ಕಟಾಕ್ಷಿಸಿ.
ಮಾನವಾವತಾರ
ಎತ್ತಿದಾತನೆ
ಹಾರಿಸೆಮ್ಮ ಭಾರ
ಅದ್ವಿತೀಯನೇ.

Verse 7

ಲೋಕದೆಲ್ಲ ಜನ
ಯೇಸುನಾಮಕೆ
ಬೊಗ್ಗಲಿಕ್ಕೆ ಮನ
ಹುಟ್ಟಿಸಾಳ್ಮನೆ.
ಅನ್ಯನಾಮಶಕ್ತಿ
ಪೂರಾ ಕುಂದಿಸು.
ಯೇಸು ಮೆಚ್ಚೊ ಭಕ್ತಿ
ಎಲ್ಲೂ ತುಂಬಿಸು.

Go to top