Verse 1

ದೇವ ಸನ್ನಿಧಾನಕೆ
ಸೇರಿರೆಲ್ಲಾ ಜನರೆ
ಆತ್ಮ ಕಿಂಪು ಶಾಂತಿಯ
ಆತನಿಂದ ಬೇಡುವ.

Verse 2

ಆತನಡಿಯೆಡೆಗೆ
ನಾವು ಸೇರಿ ಬಂದರೆ
ಆತನೆಮ್ಮ ಹತ್ತರ
ಬಂದು ವಾಸ ಮಾಡುವ.

Verse 3

ಆತ ಕೊಟ್ಟ ದಾನಕೆ
ತಕ್ಕದೆಮ್ಮ ಸ್ತೋತ್ರವೆ
ನಮ್ಮ ಹೃದಯಂಗಳ
ಆತಗಿತ್ತು ಬಿಡುವ.

Verse 4

ಧರ್ಮ ತೀರ್ಥ ಜಾತ್ರೆಯು
ಏನೂ ಫಲ ಕೊಡವು
ಯೇಸು ಕ್ರಿಸ್ತನಿಂದಲೆ
ಮೋಕ್ಷ ಪ್ರಾಪ್ತಿಸುತ್ತದೆ.

Verse 5

ಮೂರ್ತಿ ವಿಗ್ರಹಂಗಳು
ನಮಗೇನೂ ಕೊಡವು
ಜೀವವುಳ್ಳ ದೇವರೇ
ನಿನ್ನ ಸೇವೆ ಸುಖವೇ.

Verse 6

ದೇವಪುತ್ರ ಯೇಸುವು
ನಮ್ಮ ಒಂದೆ ಗತಿಯು
ಸ್ವಾಮಿ ನಿನ್ನ ಸೇವೆಗೆ
ತ್ರಾಣ ಪಾಲಿಸೆಮಗೆ.

Go to top