Verse 1

ದೇವಾ ನಿಂಗಿಪ್ಪ ಪ್ರೀತಿ
ಭೂಮಿಲಿ ಕಾಣದು
ನೀ ಮೆಚ್ಚುವಂಥ ನೀತಿ
ಯಾರಲ್ಲೂ ಸಿಕ್ಕದು.

Verse 2

ಕಾಮಾದಿ ಕ್ರೋಧ ಲೋಭ
ಸರ್ವರ ರೋಗವು
ಮಾತ್ಸರ್ಯ ಮದ ಮೋಹ
ಈ ಲೋಕ ತುಂಬಿತು.

Verse 3

ಆಯೋಗ್ಯ ನರಧರ್ಮ
ಕಾರ್ಯಕ್ಕೆ ಬಾರದು
ಅಸಹ್ಯ ನರಕರ್ಮ
ಬೆನ್ನನ್ನು ಬಿಡದು.

Verse 4

ಭೂತೂಕ ಮಿರೋ ಪುಣ್ಯ
ಭೂಲೋಕ ತಾರದು
ಮನುಷ್ಯಯತ್ನ ಶೂನ್ಯ
ಲೆಕ್ಕಕ್ಕೆ ಬಾರದು.

Verse 5

ಪಾಪಾತ್ಮ ನಿನ್ನ ಪಾಪ
ಎಷ್ಟೆಂತ ಬಲ್ಲೆಯಾ?
ಅಷ್ಟಕ್ಕೆ ಯೋಗ್ಯ ತಾಪ
ನೀನೊಮ್ಮೆ ಪಟ್ಟಿಯಾ?

Verse 6

ಶ್ರೀ ಯೇಸು ಹೊಣೆಯಾಗಿ
ಆ ಶಾಪ ತಾಳಿದ
ಪುಣ್ಯಾತ್ಮ ಕರ್ಮಿಗಾಗಿ
ಸಾವನ್ನು ತಾಳಿದ.

Verse 7

ಸಾವನ್ನು ಗೆದ್ದಿ ಯೇಸು
ಹೀಗಲ್ಲದಿದ್ದರೆ    
ಹ್ಯಾಗಾದೀತಿನ್ನು ಲೇಸು
ಅನಾತರೆಮಗೆ?

Go to top