ಪ್ರಕಟನೆ 3:20
ಇಗೋ, ನಾನು ಬಾಗಿಲ ಬಳಿಯಲ್ಲಿ ನಿಂತುಕೊಂಡು ತಟ್ಟುತ್ತಾ ಇದ್ದೇನೆ; ಯಾವನಾದರೂ ನನ್ನ ಸ್ವರವನ್ನು ಕೇಳಿ ಬಾಗಿಲನ್ನು ತೆರೆದರೆ ನಾನು ಒಳಗೆ ಬಂದು ಅವನ ಸಂಗಡ ಊಟ ಮಾಡುವೆನು, ಅವನು ನನ್ನ ಸಂಗಡ ಊಟ ಮಾಡುವನು.

ಮಾರ್ಕನು  2:17
ಯೇಸು ಅದನ್ನು ಕೇಳಿ--ಕ್ಷೇಮದಿಂದಿರುವವರಿಗೆ ಅಲ್ಲ, ಕ್ಷೇಮವಿಲ್ಲದವರಿಗೆ ವೈದ್ಯನುಬೇಕು; ನಾನು ನೀತಿವಂತರನ್ನಲ್ಲ, ಆದರೆ ಪಾಪಿಗಳನ್ನು ಮಾನಸಾಂತರಕ್ಕಾಗಿ ಕರೆಯುವದಕ್ಕೆ ಬಂದೆನು ಎಂದು ಅವರಿಗೆ ಹೇಳಿದನು.

ಮಾರ್ಕನು  4:8
ದೇವರ ಸವಿಾಪಕ್ಕೆ ಬನ್ನಿರಿ, ಆಗ ಆತನು ನಿಮ್ಮ ಸವಿಾಪಕ್ಕೆ ಬರುವನು. ಪಾಪಿಗಳೇ, ನಿಮ್ಮ ಕೈಗಳನ್ನು ಶುಚಿ ಮಾಡಿಕೊಳ್ಳಿರಿ; ಎರಡು ಮನಸ್ಸುಳ್ಳವರೇ, ನಿಮ್ಮ ಹೃದಯಗಳನ್ನು ನಿರ್ಮಲ ಮಾಡಿಕೊಳ್ಳಿರಿ.

ಯೂದನು 14-15
14  ಇಂಥವರ ವಿಷಯದಲ್ಲಿಯೇ ಆದಾಮನಿಂದ ಏಳನೆಯವನಾದ ಹನೋಕನು ಸಹ--ಇಗೋ, ಕರ್ತನು ತನ್ನ ಹತ್ತು ಸಾವಿರ ಪರಿಶುದ್ಧರನ್ನು ಕೂಡಿಕೊಂಡು
15  ಎಲ್ಲರಿಗೆ ನ್ಯಾಯ ತೀರಿಸುವದಕ್ಕೂ ಅವರಲ್ಲಿ ಭಕ್ತಿಹೀನರೆಲ್ಲರು ಮಾಡಿದ ಭಕ್ತಿಯಿಲ್ಲದ ಅವರ ಎಲ್ಲಾ ಕೃತ್ಯಗಳ ವಿಷಯವಾಗಿ ಮತ್ತು ಭಕ್ತಿಯಿಲ್ಲದ ಪಾಪಿಷ್ಠರು ತನಗೆ ವಿರೋಧವಾಗಿ ಆಡಿದ ಎಲ್ಲಾ ಕಠಿಣವಾದ ಮಾತುಗಳ ವಿಷಯವಾಗಿ ಅವರಿಗೆ ಮನದಟ್ಟು ಮಾಡುವದಕ್ಕೂ ಬಂದನು ಎಂಬ ದಾಗಿ ಪ್ರವಾದಿಸಿದನು.
 
Go to top