Verse 1

ತಿರುಗಿಂದು ತಿರುಗೀಗ
ಮಾರ್ಗ ತಪ್ಪಿದವನೆ.
ಪಾಪಭಾರ ಇಳಿಸೀಗ
ಯೇಸುವಿನ ಪಾದಕೆ.
ಶಂಕೆ ಬಿಡು ಬಡ ಪಾಪಿ
ಇದ್ದ ಹಾಗೆ ಬರಲಾಪಿ
ಬಂದರಾತ ಹರ್ಷಗೊಂಡು
ನಿನ್ನನಪ್ಪಿಕೊಳ್ಳುವ.
ನೀನು ಧೈರ್ಯ ತಂದುಕೊಂಡು
ತಿರುಗೀಗ ಹಿಂದೆ ಬಾ.

Verse 2

ತಿರುಗೀಗ ಬೆನ್ನು ಹಾಕು
ಲೋಕದಾಟ ಡಂಭಕೆ.
ಹಂದಿ ಕಾಯ್ವ ಸೇವೆ ಸಾಕು
ಊಟ ಸಿದ್ಧವಾಗಿದೆ
ನಿನ್ ತಂದೆ ಮನೆಯಲ್ಲಿ.
ಅಹಾ ತೃಪ್ತಾನಗ ಬಲ್ಲಿ
ನಿನ್ನ ಪಾಪ ಮನ್ನಿಸೊನು
ಪೂರ್ಣ ಗುಣ ಮಾಡುವ
ಮಗನೆಂತ ಕರೆಯೋನು
ತಿರಿಗೀಗ ಹಿಂದೆ ಬಾ.

Verse 3

ತಿರುಗೀಗ ಕತ್ತಲಿಂದ
ದಿವ್ಯ ತೇಜದೊಳಗೆ
ಆದಿವೈರಿಮೋಸದಿಂದ
ಸತ್ಯ ದೇವರಾಜ್ಯಕೆ
ಮೃತಿಯಿಂದ ಜೀವದಲ್ಲಿ
ಯುದ್ಧದಿಂದ ಶಾಂತಿಯಲ್ಲಿ
ಬಾ ಬಾ ನೋಡು ಕ್ರಿಸ್ತ ತಾನು
ಎದುರ್ಗೊಳ್ಳ ಓಡುವ
ಇಂದು ನಿನ್ನ ಸೇರಿಸ್ಯಾನು
ತಿರುಗಿಂದು ಇಂದೇ ಬಾ.

Go to top