ಧರ್ಮೋಪದೇಶಕಾಂಡ 10:21
21  ನಿನ್ನ ಕಣ್ಣುಗಳು ನೋಡಿದ ಆ ಮಹಾ ಭಯಂಕರವಾದ ಕಾರ್ಯಗಳನ್ನು ನಿನಗೆ ಮಾಡಿದ ಆತನೇ ನಿನ್ನ ಸ್ತೋತ್ರವು, ಆತನೇ ನಿನ್ನ ದೇವರು.
 
1 ಪೂರ್ವಕಾಲವೃತ್ತಾಂತ 29:11-13
11  ಕರ್ತನೇ, ದೊಡ್ಡಸ್ತಿಕೆಯೂ ಪರಾಕ್ರಮವೂ ಸೌಂದರ್ಯವೂ ಜಯವೂ ಮಹಿಮೆಯೂ ನಿನ್ನದೇ; ಆಕಾಶಗಳಲ್ಲಿಯೂ ಭೂಮಿಯಲ್ಲಿಯೂ ಇರುವದೆಲ್ಲಾ ನಿನ್ನದೇ. ಕರ್ತನೇ, ರಾಜ್ಯವು ನಿನ್ನದು; ನೀನು ಸಮಸ್ತಕ್ಕೂ ತಲೆಯಾಗಿ ಉನ್ನತವಾಗಿದ್ದೀ. ಐಶ್ವರ್ಯವೂ ಘನವೂ ನಿನ್ನ ಬಳಿ ಯಿಂದ ಬರುತ್ತದೆ.
12  ನೀನು ಸಮಸ್ತವನ್ನು ಆಳುವಾತ ನಾಗಿದ್ದೀ. ಶಕ್ತಿಯೂ ಪರಾಕ್ರಮವೂ ನಿನ್ನ ಕೈಯಲ್ಲಿ ಅವೆ. ಎಲ್ಲರಿಗೂ ದೊಡ್ಡಸ್ತಿಕೆಯನ್ನೂ ಬಲವನ್ನೂ ಕೊಡುವದಕ್ಕೆ ನಿನ್ನ ಕೈಯಲ್ಲಿ ಅದೆ.
13  ಆದದರಿಂದ ನಮ್ಮ ದೇವರೇ, ನಾವು ನಿನ್ನನ್ನು ಸ್ತುತಿಸಿ ನಿನ್ನ ಮಹಿಮೆ ಯುಳ್ಳ ನಾಮವನ್ನು ಕೊಂಡಾಡುತ್ತೇವೆ.
 
ಯೆಶಾಯ 25:1
1  ಓ ಕರ್ತನೇ, ನೀನೇ ನನ್ನ ದೇವರು ನೀನು ಸತ್ಯ ಪ್ರಾಮಾಣಿಕತೆಗಳನ್ನು (ಆಲೋ ಚಿಸಿ) ಅನುಸರಿಸಿ ಆದಿಸಂಕಲ್ಪಗಳನ್ನು ನೆರವೇರಿಸುತ್ತಾ ಅದ್ಭುತಕಾರ್ಯಗಳನ್ನು ನಡಿಸಿದ ಕಾರಣ ನಿನ್ನನ್ನು ಕೊಂಡಾಡುವೆನು, ನಿನ್ನ ನಾಮವನ್ನು ಮಹಿಮೆಪಡಿ ಸುವೆನು.
 
Go to top