Mangalore Church Tunes website is based on the Kannada and Thuḷu Hymn Book, and the Mangalore Tune Book, sung by the kannada and thuḷu speaking Christians of the CSI and Basel Mission Churches. This site is the fulfilment of a long standing desire to sing all the songs that are written in the kannada and thuḷu hymn book and hear all the tunes in the Mangalore Tunebook.

The love which God poured on us even before we were born by offering His Son on the cross, by making the disciples the witnesses of these things , by creating the church, by reforming the church, by sending the Basel Mission missionaries to a place called Mangalore in South India who preached about the Savior Jesus Christ. These missionaries translated the entire Bible into kannada and New Testament into thuḷu language, composed songs in kannada and thuḷu language, set these songs to tunes and compiled the Mangalore Tunebook.

Some, of the hymns from our Hymnbook have been sung, and the tunes from the Mangalore Tunebook have not been heard in all it's glory. Many christians desired to sing all the hymns, but could not as they lacked the knowledge of the tunes. Thanks be to God for giving us the grace to make this site which will bring glory and honor to Him. Kannada and thuḷu speaking christians can henceforth sing all the songs in the Hymn book right in their homes, in any part of the world.

May Lord Jesus Christ richly bless and dwell among His people as they praise Him.

Psalms 22:3
But Thou art holy, O Thou that inhabitest the praises of Israel.
 

"ಮ್ಯಾಂಗಲೋರ್ ಚರ್ಚ್ ಟ್ಯೂನ್ಸ್" ಎಂಬ ಜಾಗತಾಣ(ವೆಬ್‍ಸೈಟ್) ಕನ್ನಡ ಮತು ತುಳು ಸಂಗೀತಗಳು ಎಂಬ ಪುಸ್ತಕವನ್ನು ಹಾಗೊ ಅವುಗಳ ವಾದ್ಯವನ್ನು ನುಡಿಸಲು ಉಪಯೋಗಿಸುವ "ಮ್ಯಾಂಗಲೋರ್ ಟ್ಯೂನ್-ಬುಕ್" ಎಂಬ ವಾದ್ಯದ ಪುಸ್ತಕವನ್ನು ಒಳಗೊಂಡಿದೆ. ಈ ಸಂಗೀತ ಮತ್ತು ಲಯವನ್ನು ಕನ್ನಡ ಮತ್ತು ತುಳು ಮಾತನಾಡುವ ಕ್ರೈಸ್ತರು ಹಾಡುತ್ತಾರೆ. ಈ ಜಾಗತಾಣವು ಬಹಳ ಸಮಯದಿಂದ ಕ್ರೈಸ್ತ ಸ್ತೋತ್ರಗೀತೆಗಳನ್ನು ಹಾಡುವ, ಕೇಳುವ ನಿರೀಕ್ಷೆಯ ಪರಿಪೊರ್ಣತೆಯಾಗಿದೆ.

ದೇವರ ಪ್ರೀತಿಯು ನಾವುಗಳು ಹುಟ್ಟುವುದಕ್ಕೆ ಮುಂಚಿತವಾಗಿ ತನ್ನ ಏಕ ಪುತ್ರನಾದ ಯೇಸು ಕ್ರಿಸ್ತನನ್ನು ಕ್ರುಜೆಯ ಮೇಲೆ ನಮ್ಮ ಪಾಪಗಳಿಗೋಸ್ಕರ ಬಲಿದಾನ ಮಾಡಿ, ತನ್ನ ಶಿಷ್ಯರನ್ನು ಮೊದಲುಗೊಂಡು ನಡೆದ ಎಲ್ಲಾ ಸಂಗತಿಗಳ ವಿಷಯಗಳಿಗೆ ಸಾಕ್ಷಿಗಳನ್ನಾಗಿ ಮಾಡಿ, ಕ್ರೈಸ್ತಸಭೆಯನ್ನು ನಿರ್ಮಿಸಿ, ಅದನ್ನು ಪರಿವರ್ತಿಸಿ, ಹಾಗೆಯೇ ಬಾಸೆಲ್ ಪಟ್ಟಣದಿಂದ ಸುವಾರ್ತಿಕರನ್ನು ದಕ್ಷಿಣ ಭಾರತದ ಮಂಗಳೊರು ಎಂಬ ಪಟ್ಟಣಕ್ಕೆ ಕಳುಹಿಸಿ ಯೇಸು ಕ್ರಿಸ್ತನ್ನ ಸುವಾರ್ತೆಯನ್ನು ಸಾರುವುದಕ್ಕಾಗಿ ಕಾರ್ಯನಡೆಸಿತು.

ಈ ಸುವಾರ್ತಿಕರು ಶ್ರೀ ಬೈಬಲ್ ಪವಿತ್ರಗ್ರಂಥವನ್ನು ಕನ್ನಡಕ್ಕೆ ಮತ್ತು ಹೊಸ ಒಡಂಬಡಿಕೆಯನ್ನು ತುಳು ಭಾಷೆಗೆ ಭಾಷಾಂತರಿಸಿದರು. ಕನ್ನಡ ಮತ್ತು ತುಳು ಭಾಷೆಗಳಲ್ಲಿ ರಾಗ ಸಂಯೋಜನೆ ಮಾಡಿ "ಮ್ಯಾಂಗಲೋರ್ ಟ್ಯೂನ್ ಬುಕ್" ನ್ನು ಬಿಡುಗಡೆಗೊಳಿಸಿದರು. ಈ ಸ್ತೊತ್ರ-ಸಂಗೀತಗಳ ಪುಸ್ತಕದಲ್ಲಿರುವ ಅನೇಕ ಹಾಡುಗಳನ್ನು ಹಾಡಿದ್ದಾಗ್ಯೊ ಅದರಲ್ಲಿರುವ ಅನೇಕ ಸಂಗೀತಗಳನ್ನು ಅವುಗಳ ಮಹಿಮಾ ಮಹತ್ವದಲ್ಲಿ ಕೇಳುವಂಥಾದ್ದು ಮತ್ತು ವರುಷಗಳು ಕಳೆಯುತ್ತಿದ್ದಂತೆಯೇ ಕುಂದಿಹೋಗಿವೆ. ಆದಾಗ್ಯೊ ಅನೇಕ ಕ್ರೈಸ್ತರು ಈ ಪುಸ್ತಕದಲ್ಲಿರುವ ಎಲ್ಲಾ ಸಂಗೀತಗಳನ್ನು ಹಾಡಲು ಬಯಸುತ್ತಿದ್ದರೂ ಅವುಗಳ ಲಯಗಳ ಅಜ್ಞಾನದಿಂದಾ ವಿಫಲಗೊಂಡರು.  

ನಮ್ಮ ಮೇಲೆ ಆತನ ಕೃಪೆಯನ್ನು ಸುರಿಸಿ "ಮ್ಯಾಂಗಲೋರ್ ಚರ್ಚ್ ಟ್ಯೂನ್ಸ್" ಎಂಬ ಜಾಗತಾಣವು ನಿರ್ಮಾಣಗೊಳ್ಳುವಂತೆ ನಮ್ಮನ್ನು ಆಶೀರ್ವದಿಸಿದ ತಂದೆಯಾದ ದೇವರಿಗೆ ಧನ್ಯವಾದಗಳು, ಆತನ ನಾಮಕ್ಕೆ ಮಹಿಮೆ, ಸ್ತೋತ್ರಗಳು ಈ ಜಾಗತಾಣದ ಮೂಲಕವಾಗಿಯೊ ದೊರೆಯಲಿ.

ಕನ್ನಡ, ತುಳು ಮಾತನಾಡುವ ಕ್ರೈಸ್ತರು ಇದೀಗ ಭೊಲೋಕದ ಯಾವ ಸ್ಥಳದಿಂದಲೊ ಗೀತಗಳನ್ನು ಅವರ ಮನೆಗಳಲ್ಲಿಯೇ ಕೇಳಿ ಹಾಡಲು ಸಾಧ್ಯವಾಗಿದೆ. ಈ ಸಂಗೀತಗಳನ್ನು ಕೇಳುವ, ಹಾಡುವ ತನ್ನ ಜನರೊಂದಿಗೆ ಯೇಸು ಕ್ರಿಸ್ತನ ಆಶೀರ್ವದವೊ ಕೃಪೆಯೊ ನಿರಂತರವಾಗಿರಲಿ.

ಕಿರ್ತನೆಗಳು 22:3    ಇಸ್ರಾಯೇಲ್ಯರ ಸ್ತೋತ್ರಸಿಂಹಾಸದಲ್ಲಿರುವಾತನೇ, ನೀನು ಪವಿತ್ರ ಸ್ವರೊಪನು.

Go to top