Verse 1

ಕಾಯುವವರೆದ್ದಿದ್ದಾರೆ
ಎದ್ದೇಳಿರೆಂತ ಕೂಗುತಾರೆ
ಎಚ್ಚತು ಏಳು ಚೀಯೋನೇ
ಘನವಾದ ಶಬ್ದದಲ್ಲಿ
ಕೂಗೋರು ಮಧ್ಯರಾತ್ರಿಯಲ್ಲಿ
ಪ್ರವೀಣ ಕನ್ಯಾಸ್ತ್ರೀಯರೇ
ಇಗೋ ನಿಮ್ಮಧಿಪ
ತಕ್ಕೊಳ್ಳಿ ದೀಪವ
ಹಲ್ಲೆಲೂಯ
ಸಮಿಪವೆ
ವಿವಾಹಕೆ
ಪ್ರವೇಶ ಮಾಡೋ ಗಳಿಗೆ.

Verse 2

ಈ ಉತ್ಸಾಹರಾಗಕಾಗಿ
ಚೀಯೋನು ಹೃತ್ಸಂತೋಷವಾಗಿ
ಎಚ್ಚತ್ತು ಎದುರ್ಗೊಳ್ಳಲು
ಕೋಟಿಸೂರ್ಯ ಶೋಭಾಕ್ರಾಂತ
ಪ್ರಸನ್ನ ಸತ್ಯವಂತ ಕಾಂತ
ಆಕಾಶದಿಂದ ಬಂದನು.
ಕಿರೀಟಶ್ರೇಷ್ಠ ಬಾ
ಕಿಸ್ತ್ಯೇಸು ದೇವಜಾ
ಹೊಸಿಯನ್ನ
ನಿನ್ನೊಡನೆ
ಕೂಡಿದ್ದರೆ
ಕೂತೇವು ನಿನ್ನ ಮೇಜಿಗೆ.

Verse 3

ನಾನಾವಾದ್ಯಶಬ್ದದಿಂದ
ಮನುಷ್ಯದೂತಧ್ವನಿಯಿಂದ
ಏಳೋದು ನಿನ್ನ ಸ್ತುತಿಯು.
ನಾವು ರತ್ನದ್ವಾರ ಸೇರಿ
ಸಿಂಹಾಸನದ ಹತ್ರ ಏರಿ
ಒಡ್ಡೋಲಗಕ್ಕೆ ಬಂದೆವು
ಕಣ್ಣೆಂದು ಕಾಣದ
ಕಿವ್ಯೆಂದು ಕೇಳದ
ಆತ್ಮತೃಪ್ತಿ
ಆಯ್ತಹಹ
ನಿಂಗೊಡೆಯ
ಇಂಪಾದ ನಿತ್ಯ ಮಂಗಳ.

Go to top