Verse 1

ಸೆರೆಯಿಂದ ಚೀಯೋನನ್ನು
ಕರ್ತ ಬಿಡಿಸುತ್ತಲು
ಭಯಂಕರ ಸ್ವಪ್ನವನ್ನು
ಕಂಡ ಹಾಗಿರುವೆವು
ಆಗ ಹೃತ್ಸಂತೋಷದಿ
ಕರ್ತನನ್ನು ಸ್ತುತಿಸಿ
ರಾಜದಿ ಪ್ರವೇಶಿಸೇವು
ಆತನಡಿಗೆರಗೇವು.

Verse 2

ಎತ್ತಿ ನಿನ್ನ ಹಸ್ತವನ್ನು
ನಮ್ಮನಾಶೀರ್ವದಿಸು
ಕಷ್ಟ ಪಡುವವರನ್ನು
ಕಂಡು ಮೆಚ್ಚಿ ಸಲಹು
ತ್ರಾಣವುಳ್ಳ ಅರಸ
ನಮ್ಮ ಪ್ರಿಯ ರಕ್ಷಕ
ಜೈಸಿ ನಮ್ಮ ಶತ್ರುವನ್ನು
ಕಾಯಿ ನಿನ್ನ ಪ್ರಜೆಯನ್ನು.

Verse 3

ಆಗಲಶ್ರುಧಾರೆ ಬಿಟ್ಟು
ಬೀಜ ಬಿತ್ತಿದವರು
ಮಹಿಮೇ ಕಿರೀಟವಿಟ್ಟು
ಪೂರ್ವ ಶ್ರಮ ಮರೆತು
ಪೈರು ತಂದು ಇರಿಸಿ
ಪರಲೋಕರಾಜ್ಯದಿ
ಘನವುಳ್ಳ ರಾಜನನ್ನ
ಸ್ತುತಿಸೋರು ಹೊಸಿಯನ್ನ.

Go to top