Verse 1

ಸಂಕಷ್ಟವುಳ್ಳ ಅಂತ್ಯಯುದ್ಧದಲ್ಲಿ
ವಿಜಯಗೊಂಡು ನೆರೆ ದಣಿದು
ಅನಂತಶಾಂತಿಗಾಗಿ ಮನೆಯಲ್ಲಿ
ಈ ರಣಭೂಮಿ ಬಿಟ್ಟು ಸೇರಲು
ಬೆವರ್ದ ಮೋರೆಯೊರ್ಸಿ ಧೂಳಿಯನ್ನು
ಕಾಲಿಂದ ಝಾಢಿಸ್ಯಕ್ಷಿ ತೆರೆದು
ನಾವಿಹದಲ್ಲಿ ನಂಬಿದೆಲ್ಲವನ್ನು
ಹೊಂದಿರಲೆಮಗೆಂಥ ಸುಖವು.

Verse 2

ಅನಾದಿಸೂರ್ಯ ಶುದ್ಧಕಾಂತಿ ಮೂಡಿ
ಪ್ರಕಾಶವೆಮ್ಮ ಮೇಲೆ ಹೊಯ್ಯಲು
ವಿಮುಕ್ತ ಭಕ್ತ ಸಭೆಯನ್ನು ಕೂಡಿ
ಅನಂತತೇಜವನ್ನು ಪಡೆದು
ಸ್ವರಾಜ್ಯದೊಳ್ ಪುನೀತ ರಾಜರಾಗಿ
ಪ್ರವೇಶಮಾಡಿ ದೋಷ ಕಳೆದು
ಸ್ವಗೃಹದಲ್ಲಿ ಶುದ್ಧ ಮಕ್ಕಳಾಗಿ
ಹೊಕ್ಕಾಗಲೆಮಗೆಂಥ ಸುಖವು.

Verse 3

ನಮ್ಮಾತ್ಮ ತನ್ನ ಕಾಂಕ್ಷೆಗನುಸಾರ
ಶರೀರಭಾರವನ್ನು ಕಳೆದು
ಹರೇದ ಹದ್ದಿನಂತೆ ಮೇಲೆ ಹಾರ
ಪ್ರಾರಂಭಿಸಿ ಅನಾದಿ ತೇಜಕೂ
ವಿರಾಜ ಪೀಠಕೂ ಸಮೀಪಸಾಗಿ
ಭೂಪರಕರ್ತನೂ ಉದ್ಧಾರಿಯೂ
ಆದಾತನನ್ನು ನಾವು ಬೆರಗಾಗಿ
ಕಣ್ಣಾರೆ ನೋಡಲೆಂಥ ಸುಖವು.

Verse 4

ನಮ್ಮೆಲ್ಲ ಶಾಪ ದುಷ್ಟತನ ನೀಗ
ಸ್ವರಕ್ತ ಸುರಿಸಿದ ಗುರುವೇ
ನೀವಿತ್ತ ಬನ್ನಿ ಹರ್ಷಗೊಳ್ಳಿರೀಗ
ಸರ್ವಾಶೀರ್ವಾದ ಹೊಂದಿದವರೇ
ನಾ ನಿಮಗೆ ಜಗದಾರಭ್ಯದಿಂದ
ಸಂಸಿದ್ಧಿಸಿದ ರಾಜ್ಯ ಪಡೆದು
ಎಂದ್ಹೇಳೋದನ್ನು ನಾವು ಭ್ರಮೆಯಿಂದ
ಕಿವ್ಯಾರೆ ಕೆಳಲೆಂಥ ಸುಖವು.

Verse 5

ಸುವರ್ಣಮಯಪಟ್ಣ ಹೊಕ್ಕ ಮೇಲೆ
ಉತ್ಥಾನದ ಶರೀರ ಧರಿಸಿ
ಒಮ್ಮೊಮ್ಮೆ ಹಿಂದೆ ದೃಷ್ಟಿಸುವ ವೇಳೆ
ಭೂಯಾತ್ರೆಯ ಒಂದೊಂದು ಸಂಗತಿ
ಒಂದೊಂದು ಕಷ್ಟ ನೆಪ್ಪು ಮಾಡಿಕೊಂಡು
ಶಿಲುಬೆ ಹೊತ್ತದ್ದನ್ನು ನೆನೆದು
ಅದಾಗಿ ಹೋಯಿತೆಂದು ಹರ್ಷಗೊಂಡು
ಹಾಡುತ್ತಲಿರೆ ಎಂಥ ಸುಖವು.

Verse 6

ಎಲೈ ಸಹೋದರಾ ನಿರಾಶೆ ಬಿಟ್ಟು
ಬಿಕ್ಕಟ್ಟು ಹಾದಿ ಹಿಡಿಧೋಗುವ
ದಿನಾಲು ಮೂಲುಗಿ ಕಣ್ಣೀರನ್ನಿಟ್ಟು
ನಮ್ಮನ್ನು ಹೊಂಚಿ ನೋಡೋ ವೈರಿಯ
ವಿರೋಧವಾಗಿ ಯುದ್ಧ ತೀರಿಸೋಣ
ಒಂದೊಂದಾತಂಕವನ್ನು ತೆಗೆದು
ಸಜ್ಜೀವದ ಕಿರೀಟ ಪಡೆಯೋಣ
ಅದಾಗಲೆಮಗೆಂಥ ಸುಖವು.

Go to top