Verse 1

ಹರ್ಷದಿಂ ಹರ್ಷದಿಂ ಮುಂದೋಡುವಾ
ಮೋಕ್ಷದ ಸೈನ್ಯವ ಸಂಧಿಸುವಾ
ಯೇಸುವು ನಮ್ಮನ್ನು ಕರೆಯಲು
ಹರ್ಷದಿಂ ಮೇಲಕೆ ಓಡುವೆವು.
ಲೋಕಪ್ರಯಾಣವು ಮುಗಿಯಲು
ಸ್ವರ್ಗದಾನಂದಕ್ಕೆ ಸೇರುವೆವು
ಸೇರಿದ ಮೇಲೆ ನಿರಂತರಕು
ಹರ್ಷದಿಂ ಹರ್ಷದಿಂ ಹಾಡುವೆವು.

Verse 2

ಸಾವಿನ ಬಾಣವು ನಾಟಿದರು
ನೋವಿನ್ನು ನಮಗೆ ಮಾಡದದು
ಯೇಸು ಸಮಾಧಿಯ ಜಯಿಸಿದ
ಹರ್ಷದಿಂ ಹರ್ಷದಿಂ ಮುಂದೋಡುವ.
ಮರಣ ನಮ್ಮನ್ನು ಜಯಿಸದು
ಅದರ ಕೊಂಡಿಯು ಮುರಿಯಿತು
ಪರಮ ಭಾಗ್ಯವನಾಶಿಸುತಾ
ಹರ್ಷದಿಂ ಹರ್ಷದಿಂ ಮುಂದೋಡುವಾ.

Verse 3

ನಮ್ಮನು ಬಿಟ್ಟ ಸಂಗಾತಿಗಳು
ಮೇಲಣ ಸೈನ್ಯದ ಸಂಗಡಲು
ನಮ್ಮನ್ನು ಮೇಲಕ್ಕೆ ಕರೆದರು.
ಹರ್ಷದಿಂ ಹರ್ಷದಿಂ ಹೋಗುವೆವು.
ಚಿನ್ನದ ವೀಣೆಯ ಗಾಯನವು
ಇಂಪಾದ ರಾಗದ ಧ್ವನಿಗಳು
ಕಿವಿಗೆ ಬಿದ್ದವು ಕೇಳಿದೆವು
ಹರ್ಷದಿಂ ಹರ್ಷದಿಂ ಓಡುವೆವು.

Go to top