Verse 1

ಹಾ! ಏನಿದು? ಮೆಲ್ಲಾನೆ ಬಪ್ಪುದು
ಮೃತ್ಯುವೋ? ಮೃತ್ಯುವೋ?
ಈ ಜೀವಜ್ಯೋತಿಯಾರಿಸುವದು
ಮೃತ್ಯುವೋ? ಮೃತ್ಯುವೋ?
ಮೃತ್ಯಾದರೆ ನಾ ಮುಕ್ತನೆ
ಸಮಸ್ತ ಕಷ್ಟ ತೀರುತೆ
ನನ್ನರಸನ್ನ ಕಾಣುವೆ.
ಶುಭವೆ ಶುಭವೆ.

Verse 2

ನನ್ನಾಪ್ತರೇ ಅಳೊದು ಯಾತಕೆ?
ಶುಭವೆ ಶುಭವೆ.
ಸೌಭಾಗ್ಯವೀಗ ನಂಗೆ ಸಿಕ್ಕುತೆ
ಶುಭವೆ ಶುಭವೇ.
ನನ್ನರಸನ್ನ ಕಾಣ್ಬರೆ
ಇನ್ಯಾವ ವಿಘ್ನವೆನಗೆ?
ಮೈಮೇ ಕಿರೀಟ ಹೊಂದುವೆ.
ಶುಭವೆ ಶುಭವೆ.

Verse 3

ಕೈಯೊಳು ವೀಣೆ ಎತ್ತಿಕೊಳ್ಳುವೆ
ಶುಭವೆ ಶುಭವೆ.
ವಿಮುಕ್ತ ಸಂಘ ಸೇರಿ ಹಾಡುವೆ.
ಶುಭವೆ ಶುಭವೆ.
ಬಂದಾರೆ ದೂತರಿಲ್ಲಿಗೆ
ನನ್ನಾತ್ಮ ವೈಯುವದಕೆ
ಎನ್ ಯೇಸು ಹತ್ರ ಸೇರುವೆ.
ಶುಭವೆ ಶುಭವೆ.

Verse 4

ಕೇಳ್ ಕೇಳಿರೋ ನಮ್ಮಪ್ಪ ಕರೆದ
ಹೋಗುವೆ ಹೋಗುವೆ.
ನಾ ಕೋರಿದಾ ವಿಶ್ರಾಂತಿಭವನ
ಸಿದ್ಧವೆ ಸಿದ್ಧವೆ.
ಸಲಾಂ ಸಲಾಂ ನಾ ಹೋಗುವೆ
ಹೊತ್ತಿಲ್ಲ ನಿಲ್ಲುವದಕೆ
ಶ್ರೀಯೇಸುಪಾದ ಸೇರುವೆ
ಶುಭವೆ ಶುಭವೆ.

Go to top