Verse 1

ಹೋಗುವೆ ಹೋಗುವೆ
ಯೇಸುವನ್ನು ನೋಡುವೆ
ಆತನಡಿಗೆರಗೋಣ
ಸನ್ನಿಧಾನ ಸೇವಿಸೋಣ
ನನ್ನ ಪ್ರಾಣದಾಶೆಯೆ.

Verse 2

ಕಾಂತಿಯೇ ಕಾಂತಿಯೇ
ಮೇಘಹರ ಸೂರ್ಯನೇ
ಸರ್ವ ಭಕ್ತರೈಕ್ಯದಲ್ಲಿ
ಯೇಸುವನ್ನು ನೋಡುವಲ್ಲಿ
ನಾನು ಎಂದು ಸೇರುವೆ?

Verse 3

ರಮ್ಯವು ರಮ್ಯವು
ದೂತ ಸೈನ್ಯ ಹಾಡೊದು
ರೆಕ್ಕೆ ಇರುತಿದ್ದ ವೇಳೆ
ಹಾರಿ ತಗ್ಗು ದಿನ್ನೆ ಮೇಲೆ
ಚೀಯೊನ್ ಏರುತಿದ್ದೆನು.

Verse 4

ಚೋದ್ಯವು ಚೋದ್ಯವು
ಸಾಲೆಮ್ ಪಟ್ಣ ಸೇರೊದು
ಸ್ವರ್ಗಪಟ್ಣದೊಳ್ ನಿವಾಸ
ಮಾಡಿಕೊಳ್ಳದೆಂಥುಲ್ಲಾಸ
ಯಾರು ವರ್ಣಿಸುವರು?

Verse 5

ಮಧುರ ಮಧುರ
ಜೀವಫಲಭಕ್ಷಣ
ಕಂಡು ಆ ವೃಕ್ಷಂಗಳಾಳಿ
ಸ್ವಪ್ನವಂತನಂತೆ ಬಾಳಿ
ಹಾಡ್ವೆ ನಿತ್ಯ ಮಂಗಳ.

Go to top