Verse 1

ನಾ ದಿವ್ಯ ದೂತನಾಗಿ
ಕೈಯಲ್ಲಿ ವೀಣೆಯ
ತಕ್ಕೊಂಡು ತಲೆ ಬಾಗಿ
ವಂದಿಪೆ ಸ್ವಾಮಿಯ.
ನಿರಂತ್ರದಲ್ಲು ಬಾಳಿ
ಆತನ್ನ ಕೀರ್ತಿಪೆ
ನನ್ನೀಶನಂ ಕೊಂಡಾಡಿ
ಇಂಪಾಗಿ ಹಾಡುವೆ.

Verse 2

ಅಲ್ಲೇನೂ ದುಃಖವಿಲ್ಲ
ಕಣ್ಣೀರು ಇರದು
ನಾ ಕ್ಷೀಣನಾಗೋದಿಲ್ಲ
ಭಯಾದಿ ತೋರದು
ಕ್ರಿಸ್ತ್ಯೇಸು ಬಳಿಯಲ್ಲಿ
ನಿರಂತ್ರ ಬಾಳುವೆ
ಸ್ವರ್ಗೀಯ ಸೇನೆಯಲ್ಲಿ
ಸಂಗೀತ ಹಾಡುವೆ.

Verse 3

ಅನೇಕರನ್ನು ಯೇಸು
ಆ ಸಂಘಕ್ಕೋಯ್ದನು
ನಂಗಾದ್ರು ಆತ ಲೇಸು
ಸೌಭಾಗ್ಯವೀಯನು.
ನಾ ರೋಗದಲ್ಲಿ ಬಿದ್ದು
ಸಾಯುವ ಕಾಲಕೆ
ಕ್ರಿಸ್ತ್ಯೇಸು ಹತ್ರವಿದ್ದು
ವೈಯೋನು ಸ್ವರ್ಗಕೆ.

Verse 4

ಶ್ರೀ ಯೇಸು ಸೇರಿಸೆನ್ನ
ಆ ಸಂಘದೊಳಗೆ
ಸ್ವರ್ಗೀಯ ವೀಣೆಯನ್ನ
ಕೊಡೆನ್ನ ಹಸ್ತಕ್ಕೆ
ಕಿರೀಟವಿಟ್ಟು ಬಾಗಿ
ನಿನ್ನನ್ನು ವಂದಿಪೆ
ನಿನ್ನೋಳ್ ಕೃತಜ್ಞನಾಗಿ
ನಿರಂತ್ರ ಹಾಡುವೆ.

Go to top