Verse 1

ನಾ ದೂರದಿಂದ ಯೆಹೋವ ಪೀಠವಂ
ಕಂಡ್ಹರ್ಷವಾಗಿ ಸೇರಲಾಸ್ಥಾನವಂ.
ನನ್ನೊಳಗಿಹುದೆಷ್ಟೊ ಆಶೆ
ನಿನ್ನಲ್ಲಿ ತಂದೆ ನನ್ನಭೀಲಾಷೆ.

Verse 2

ಅಹಾ! ಸೌಂದರ್ಯಪೂರಿತ ಮಂದಿರ
ನೋಡೊದಸಾಧ್ಯ ಆ ಗೃಹಕಾಂತಿಯ.
ಯಾವಾಗ ತೀರೋದೀ ಪ್ರಯಾಸ?
ಎಂದೆಂಗೆ ಸಿಕ್ಕೋದು ಸ್ವರ್ಗ ವಾಸ?

Verse 3

ಅಯ್ಯೋ ನಾ ಪಾಪಿ ಲೌಕಿಕ ಮನಸ್ಸೂ
ಸ್ವಭಾವದಿಂದ ಅಶುಚಿ ತುಟಿಯೂ
ಇರೋದೆನ್ನಲ್ಲಿ ನಾನಶುದ್ಧ
ಶ್ರೀ ಯೇಸು ಮಾಡು ನನ್ನನ್ನು ಶುದ್ಧ.

Verse 4

ಕರ್ತಾ ನಾ ನಿನ್ನ ಪ್ರೇಮವಂ ಗ್ರಹಿಸಿ
ಪ್ರಪಂಚದಿಚ್ಛೆ ಮೋಹದಿ ತ್ಯಜಿಸಿ
ಉಪದ್ರ ಶ್ರಮವೆಲ್ಲಾ ತಾಳ್ವೇ
ನಿನ್ನೊಳು ಸೇರಿ ನಾ ನಿತ್ಯ ಬಾಳ್ವೆ.

Verse 5

ನಿನ್ನನ್ನು ಕಂಡೆ ಪವಿತ್ರ ಪಟ್ಣವೇ
ನಿನ್ನೆಲ್ಲಾ ಬೀದಿ ಸ್ವರ್ಣಾಲಂಕೃತವೇ.
ನಾನೆಂದೂ ಮರ್ಯೆ ನಿನ್ನ ಕಾಂತಿ
ನಿನ್ನಲ್ಲೇ ನಿತ್ಯ ಸಂತೃಪ್ತಿ ಶಾಂತಿ.

Go to top