Verse 1

ಸ್ವರ್ಗಲೋಕದ ಸಂತೋಷ
ನಿತ್ಯ ಪೋಷ
ಈಕ್ಷಿಸೆನ್ನ ಆತ್ಮವೇ.
ಈ ಭೂಲೋಕವೀಯ್ವ ತೋಷ
ತುಂಬಾ ದೋಷ.
ಬಪ್ಪುದಿನ್ನು ಅಂತ್ಯವೇ.

Verse 2

ಆ ಸಂತೋಷದಾಶೆಯಿಂದ
ವೇಗದಿಂದ
ಓಡುತ್ತೇನೆ ಅಲ್ಲಿಗೆ.
ಲಕ್ಷ್ಯಗಟ್ಲೆ ದೂತಸೇನೆ
ನೋಡುತ್ತೇನೆ
ಅಲ್ಲೇ ನನ್ನ ಯೇಸುವೇ.

Verse 3

ಭಯ ಈ ಸಮುದ್ರದಲ್ಲಿ
ರೇವಿನಲ್ಲಿ
ನನ್ನ ದೋಣಿ ಸೇರಿಸು.
ಹಿರೀ ಅಣ್ಣಾ ಸಮಾಧಾನ
ನಿತ್ಯ ಮನ
ನನಗನುಗ್ರಹಿಸು.

Verse 4

ಲೋಕದಲ್ಲಿ ಎಷ್ಟೊ ಕಷ್ಟ
ದುಃಖ ನಷ್ಟ
ತುಂಬಿರೋದು ಕರ್ತನೆ.
ಸೋಲದ ವಿಶ್ವಾಸವನ್ನು
ಕೊಟ್ಟೆನ್ನನ್ನು
ಸಾಗಿಸಂತ್ಯವರೆಗೆ.

Verse 5

ಸರ್ವಶಕ್ತ ಯೇಸುಕರ್ತ
ಪರಮಾರ್ಥ
ಶೀಘ್ರವಾಗಿ ಪಾಲಿಸು.
ಘೋರ ಮರಣಾಂಧಕಾರ
ಸರ್ವ ಭಾರ
ನಿನ್ನ ಮುಂದೆ ನಿಲ್ಲದು.

Verse 6

ಲೋಕದೆಲ್ಲಾ ಪಾಪ ಶಾಪ
ಸರ್ವ ತಾಪ
ನೀ ವಿನಾಶ ಮಾಡಿದಿ.
ನಿನ್ನ ದುಃಖ ವ್ಯಥೆ ಭಯ
ನಿನ್ನ ಜಯ
ಎಲ್ಲಾ ನನಗೀಯುತಿ.

Verse 7

ಯೇಸುಕ್ರಿಸ್ತ ನನ್ನ ಪ್ರಾಣ
ನಿಂಗೆ ಮಾನ
ಸ್ತೋತ್ರ ಸ್ತುತಿ ಆಗಲಿ.
ನಿನ್ನ ವಾಸ ಕುರೀಮರೀ
ಸೇರೋ ದಾರೀ
ತೋರಿಸನುಗ್ರದಿ.

Go to top