Verse 1

ಹಾ! ಯೆರೂಸಲೇಮ್ ಶ್ರೀವಾಸ 
ಎಂಥ ಜ್ಯೋತಿ ಶೋಭೆಯು
ಎಂಥ ಹರ್ಷ ಎಂಥುಲ್ಲಾಸ
ನಿತ್ಯ ನಿನ್ನಲಿರೋದು.
ಹಲ್ಲೆಲೂಯ ಜಯ ಜಯ
ಮೂಡಿ ಬಂತು ಸುರ್ಯೋದಯ
ಮೂಡಿ ಬಂತಾ ದಿನವು
ಅದಕಂತ್ಯವಿರದು.

Verse 2

ನಾನು ಈಗ ಸೇರುತೇನೆ
ಕಾಂತಿಮಯ ಪಟ್ಟಣ
ಇಂದು ಹೊಂದಿಕೊಳ್ಳುತೇನೆ
ಸ್ವರ್ಗವಸ್ತ್ರಭೂಷಣ
ಚಿನ್ನದ ಕಿರೀಟವನ್ನು
ಇಟ್ಟು ದೇವಮುಖವನ್ನು
ನೋಡುತೇನೆ ನಿತ್ಯಕು
ಈ ಸಂತೋಷ ತೀರದು.

Go to top