Verse 1

ದಿವ್ಯ ಸಾಲೆಮ್ ಸ್ವರ್ಣ ಕಾಂತಿ
ಎಸೆವಂಥ ಪಟ್ಟಣ.
ನಿನ್ನ ನೋಟದಿಂದ ಶಾಂತಿ
ಹೊಂದೊದೆನ್ನ ಹರಣ.
ಭೂಸಂಚಾರ ತೀರಲು
ನಿನ್ನೊಳ್ ವಸ್ತಿ ಮಾಡ್ವೆನು.

Verse 2

ದೂತಸಂಘ ನಿತ್ಯವಾಗಿ
ಹಲ್ಲೆಲೂಯ ಹಾಡುವ
ಶೋಕವೆಲ್ಲ ಲೋಪವಾಗಿ
ನಿತ್ಯ ಹಬ್ಬ ನಡೆವ
ನಿನ್ನ ಚಿನ್ನ ಕೋಟೆಯು
ನನ್ನ ನಿತ್ಯ ವಾಸವು.

Verse 3

ಮೊಬ್ಬು ಮೋಡ ನೀಗಿ ಹೋಗಿ
ನಿತ್ಯ ತೇಜಸ್ಸಿಪ್ಪುದು
ಯೇಸು ನೀತಿಸೂರ್ಯನಾಗಿ
ನಿನ್ನೊಳ್ ಕಾಂತಿ ಹೊಯ್ವನು.
ದುಃಖ ಕಷ್ಟ ಕಾಣವು
ತೀರದು ಉಲ್ಲಾಸವು.

Verse 4

ನಾನು ಮರ್ತ್ಯ ದೇಹದಲ್ಲಿ
ಅಮರತ್ವ ಧರಿಸಿ
ಯೇಸು ದೇಹದಂದದಲ್ಲಿ
ಶೋಭೆಯಾಗಿ ಕಾಣಿಸಿ
ಹರ್ಷದಿಂದ ನಿತ್ಯವು
ಸುಖದಿಂದ ಬಾಳ್ವೆನು.

Verse 5

ಪ್ರಾಣ ನಿನ್ನ ರಾಜನನ್ನು
ಕಣ್ಬಿ ಪೂರ್ಣ ತೇಜದೊಳ್
ಶುಭ್ರ ನೀತಿವಸ್ತ್ರವನ್ನು
ತೊಟ್ಟುಕೊಂಬಿ ನಿತ್ಯದೊಳ್
ಕಣ್ಣೀರನ್ನು ತಂದೆಯು
ತಾನೇ ಓರಸುವನು.

Verse 6

ಸೇರಿ ತಂದೇ ಮನೆಯಲ್ಲಿ
ಹೊಂದುವಿ ಕಿರೀಟವ
ನೀರುಬುಗ್ಗೇ ಬಳಿಯಲ್ಲಿ
ನಡಿಸೋನು ರಕ್ಷಕ.
ತೃಪ್ತನಾಗಿ ನಿತ್ಯದಿ
ಹಲ್ಲೆಲೂಯ ಹಾಡುವಿ.

Go to top