Verse 1

ಯೆರೂಸಲೆಮ್
ಮೆಲೂರು ನಿನ್ನಲೆ
ನಾನಿದ್ದರೊಳ್ಳೆದು
ಎಂದೆನಗೆ
ಸ್ವಪಟ್ಣದೊಳಗೆ
ಪ್ರವೇಶವಾಗೊದು?
ನನ್ನಾತ್ಮ ಇಹವನ್ನು
ಬಿಟ್ಟೇರಿ ಮೇಲಕೆ
ಪ್ರಪಂಚತುಷ್ಟಿಯನ್ನು
ವಿಸರ್ಜಿಸುತ್ತದೆ.

Verse 2

ಸುದಿನವೆ
ಶುಭ ಮೂಹೂರ್ತವೆ
ನೀನೆಂದು ಬರುವಿ?
ಸ್ವದೇಶಕೆ
ನಾನೆಂದು ಮುಟ್ಟುವೆ
ಆಕಾಶರಥದಿ?
ಪ್ರೀತೀಲಿ ಭಕ್ತರನ್ನು
ಕಾಪಾಡುವಾತಗೆ
ಎಂದೆನ್ನ ಆತ್ಮವನ್ನು
ನಾ ಕೊಟ್ಟು ಬಿಡುವೆ?

Verse 3

ನಾ ಸೇರ್ವೆನು
ಆ ಘನಕೋಟೆಗೆ
ಮಹಾ ಸಂತೋಷದಿ
ವಿಮುಕ್ತರ
ಆ ಘನ ಸಂಘಕೆ
ನಾ ಸೇರ್ವೆ ಹರ್ಷಿಸಿ.
ಮಹಾ ಪ್ರಭಾವಯುಕ್ತ
ಪ್ರವಾದಿಸೇನೆಯು
ಅಪೊಸ್ತಲಾದಿ ಭಕ್ತ
ಸಮೂಹ ಕಾಣ್ಬುದು.

Verse 4

ಯೆರೂಸಲೆಮ್
ಸಂತೋಷಪೂರ್ತಿಯು
ನಿನ್ನಲ್ಲಿ ತೀರದು
ಹಲ್ಲೆಲೂಯ
ನಿನ್ನಲ್ಲಿ ನಿತ್ಯಕು
ಸಂಸ್ತುತಿಗೀತವು.
ಕ್ರಿಸ್ತ್ಯೇಸು ಅಲ್ಲಿ ನನ್ನ
ನೀ ಬೇಗ ಮುಟ್ಟಿಸು
ಆ ನಿತ್ಯ ಹೊಸಿಯನ್ನ
ಹಾಡೋದೇ ಮುಕ್ತಿಯು.

Go to top