Verse 1

ಮೇಲಾದ ಪಟ್ಣದೆಸೆಗೆ
ದಿನಾಲು ಹೋಗುತಿರುತೇನೆ
ಈ ಜೀವ ಬಾಲಶಿಕ್ಷೆಯೆ
ದೇಶಾಂತ್ರಿಯಾಗಿ ಇಲ್ಲಿದ್ದೇನೆ
ಈ ಜೀವ ಬರೆ ಮಾರ್ಗವೇ
ಸ್ವಪಟ್ಣ ಪರದಲ್ಲಿಯೇ.
ನಾನಲ್ಲಿ ಯೇಸು ಕ್ರಿಸ್ತನಿಂದ
ಸ್ವತಂತ್ರ ಹೊಂದುವದರಿಂದ
ನಾನಾತನಿಷ್ಟ ಪಾದಕೆ
ಬಂದಾಗ ಹರ್ಷಗೊಳ್ಳುವೆ.

Verse 2

ನಾನಲ್ಲಿ ಸೇರಿದಾಗಲು
ಸಂಸ್ತುತಿ ಎಂದು ತೀರ್ವದಿಲ್ಲ
ಕಾಣೋದು ಮರ್ಮವೆಲ್ಲವು
ಆಶ್ಚರ್ಯಕಲ್ಲಿ ಮಿತಿ ಇಲ್ಲ.
ಅಲ್ಲೆಂಗೆ ಪೂರ್ಣವಹುದು
ಪವಿತ್ರ ಕ್ರೂಜೆಫಲವು
ವಿಶ್ವಾಸಿಸಿದ್ದು ಶೋಭಿಸೊದು
ಅಪೇಕ್ಷಿಸಿದ್ದು ಒದಗೋದು
ಕ್ರೂಜೇಲಿ ಸತ್ತ ಕರ್ತಗೆ
ಅನಂತ ಸ್ತೊತ್ರ ಹಾಡುವೆ.

Verse 3

ನಾನಲ್ಲಿ ಅಪ್ಪಿಕೊಳ್ಳುವೆ
ಮುಂತೆರಳಿದ ಪ್ರಿಯರನ್ನು
ಈ ಕಣ್ಣಿನಿಂದ ದೃಷ್ಟಿಪೆ
ಮಹತ್ವವುಳ್ಳ ಕರ್ತನನ್ನು.
ಸಮಸ್ತ ದುತಗಣವೂ
ವಿಮುಕ್ತ ಭಕ್ತಸಭೆಯೂ
ಅನಂತ ದಿವ್ಯ ಸ್ತೋತ್ರರಾಗ
ತಮ್ಮೊಡೆಯಂಗೆ ಹಾಡುವಾಗ
ಆ ಮಂಗಳಾತ್ಮರೊಂದಿಗೆ
ಮಹಾ ಸಂತೋಷ ಪಡುವೆ.

Go to top