Verse 1

ಸ್ವದೇಶ ಸ್ವದೇಶ ನಿನ್ನಲ್ಲಿಗೆನೆ
ಪ್ರಪಂಚದೊಳಿಂದ ನಾ ಹಂಬಲಿಪೆ.
ನನ್ನಾತ್ಮಕೀ ಲೋಕದಿ ಶಾಂತಿ ಉಂಟೋ?
ಅಃ ಪಾಪರಹಿತ ಬಿಡಾರವಿಲ್ಲೋ?
ಇಲ್ಲ ಇಲ್ಲ ಇಲ್ಲಕಟಾ
ಮೇಲ್ಲೋಕದೊಳೆನ್ನ ಸ್ವದೇಶ ಅಹಾ.

Verse 2

ಆ ಲೋಕದಿ ಪಾಪವೇನೇವಿರದು
ಸೈತಾನನೂ ಸಾವೂ ಪ್ರವೇಶಿಸರು
ವೈಭವದಿ ಯೇಸುವೇ ಆಳುವನು
ವಿಶುದ್ಧರ ಮೇಳವು ಬಾರಿಸೋದು.
ಅಲ್ಲಿ ಅಲ್ಲಿ ಅಲ್ಲಿ ಅವೆ.
ಸ್ವದೇಶದ ಸೊಗಸು ಶಾಂತಿಗಳೆ.

Verse 3

ಆ ಪಟ್ಣದ ಮಹಿಮೆ ಕೇಳಿದಿರಿ
ಯೋಹಾನನು ನೋಡಿದ ದರ್ಶನದಿ
ಆ ಬೀದಿಗಳೆಲ್ಲ ಸುವರ್ಣದವೆ
ಹನ್ನೆರಡು ಬಾಗಲು ಮುತ್ತುಗಳೆ.
ಬನ್ನಿ ಬನ್ನಿ ಬನ್ನಿರೀಗ
ಸಾಲೇಮಿನದ್ವಾರ ಪ್ರವೇಶಿಸುವ.

Verse 4

ಸ್ವದೇಶಕೆ ಮುಟ್ಟುವ ತನಕವು
ನಾವನ್ಯರ ಹಾಸ್ಯಕೆ ಹೆದರೆವು.
ಪ್ರಯಾಣದ ಶೋಧನೆ ಕಷ್ಟಗಳ
ಕ್ರಿಸ್ತ್ಯೇಸುವಿನೊಡನೆ ಸೈರಿಸುವ
ಆತ ಆತ ಹೌದಾತನು.
ಈ ಯಾತ್ರೆಯೊಳೆಮಗೆ ತಾರಕನು.

Go to top